Pray for peace and tranquility.
ಬಾಗೇಪಲ್ಲಿ: ಧಾರ್ಮಿಕ ೇತ್ರಗಳ ಜೀಣೋರ್ದ್ಧಾರ ಹಾಗೂ ನೂತನ ದೇವಾಲಯ ಪ್ರತಿಷ್ಠಾಪನೆಯಿಂದ ಗ್ರಾಮಗಳಲ್ಲಿ ನೆಮ್ಮದಿ ವಾತಾವರಣ ನಿರ್ಮಾಣವಾಗಿ ಶಾಂತಿ ಸಮೃದ್ಧಿ ನೆಲೆಸಲಿದೆ. ಹಾಗಾಗಿ ಪ್ರತಿಯೊಬ್ಬರು ಶ್ರದ್ದಾ ಭಕ್ತಿಯಿಂದ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಾಪಂ ಮಾಜಿ ಸದಸ್ಯ ಕೆ.ಕೆ.ವೆಂಕಟೇಶ್ ತಿಳಿಸಿದ್ದಾರೆ.
ತಾಲೂಕಿನ ಗುಮ್ಮವಾಂಡ್ಲಪಲ್ಲಿಯಲ್ಲಿ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದೊಂದಿಗೆ ನಿರ್ಮಿಸಿರುವ ಗ್ರಾಮ ದೇವತೆ ಶ್ರೀ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇಗುಲ ಲೋಕಾರ್ಪಣೆ,ಶ್ರೀ ಆಂಜನೇಯಸ್ವಾಮಿ ದೇಗುಲ ಪುನರ್ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಗುಮ್ಮವಾಂಡ್ಲಪಲ್ಲಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ದೇಗುಲಗಳ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ತೋಳ್ಳಪಲ್ಲಿ ಗ್ರಾಮ ಪಂಚಾಯಿತಿವ್ಯಾಪ್ತಿಯ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿ ಇಷ್ಟಾರ್ಥಗಳನ್ನು ನೇರವೇರಿಸುವಂತೆ ಪ್ರಾರ್ಥಿಸಿಕೊಂಡಿದ್ದಾರೆ.
ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಲಶ ಸ್ಥಾಪನೆ ಮಹೋತ್ಸವದ ಪ್ರಯುಕ್ತ ಮೂರು ದಿನಗಳವರೆಗೆ ದೇಗುಲ ಪ್ರಾಂಗಣದಲ್ಲಿ ಗಣಪತಿ ಪೂಜೆ, ನವಗ್ರಹ ಆರಾಧನೆ, ವಾಸ್ತು ಮತ್ತು ಮೃತ್ಯುಂಜಯ ಹೋಮ, ಬಲಿಹರಣ, ಪೂರ್ಣಾಹುತಿ, ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೇರವೇರಿಸಲಾಯಿತು.
ದೈವ ಕಾರ್ಯದ ಅಂಗವಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು, ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಹಾಗೂ ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ತಂಬಿಟ್ಟು ಜಾತ್ರೆ ಆದ್ದೂರಿಯಾಗಿ ಆಚರಿಸಿದರು. ಮೂರು ದಿನಗಳವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಗ್ರಾಮಸ್ಥರ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಎನ್ಡಿಎ ಮುಖಂಡ ಹರಿನಾಥರೆಡ್ಡಿ, ಮುಖಂಡರಾದ ಜೆ.ಪಿ.ರೆಡ್ಡಿ, ಸುದರ್ಶನ್ ನಾಯ್ಡು, ಈಶ್ವರರೆಡ್ಡಿ, ಎ.ಆರ್.ಗಂಗುಲಪ್ಪ, ಶ್ರೀರಾಮರೆಡ್ಡಿ, ಅಂಜನೇಯರೆಡ್ಡಿ, ಮದ್ದಿರೆಡ್ಡಿ, ಶ್ರೀನಿವಾಸ್, ಚೌಡರೆಡ್ಡಿ, ಜಯರಾಮರೆಡ್ಡಿ, ಜಗನ್ನಾಥ್, ಅಮರೇಶ್, ಆರ್ಚಕರಾದ ಕೃಷ್ಣಮೂರ್ತಿ, ಅನಂತಶಾಸಿ, ರಾಮಮೂರ್ತಿ, ವೆಂಟೇಶ್ ಶರ್ಮಾ ಇತರರು ಇದ್ದರು.