ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬಾನ್ಸುರಿವಾದಕಪಂ.ಪ್ರವೀಣಗೊಡ್ಖಿಂಡಿ ಅವರ ನೇತೃತ್ವ ಮತ್ತುಮಾರ್ಗದರ್ಶನದಲ್ಲಿ ಸಂಗೀತಕ್ಷೇತ್ರದಲ್ಲಿ ಅನುಪಮ ಕಾರ್ಯಮಾಡುತ್ತಿರುವ ಬೆಂಗಳೂರಿನ ಸಂಜೋಗಸಂಸ್ಥೆ, ಇದೀಗಕೊಳಲು.Com (edy) ಎಂಬಲಘುಹಾಸ್ಯ ನಾಟಕದ ಮೂಲಕ ಹೊಸಪ್ರಯತ್ನಕ್ಕೆ ಮುಂದಾಗಿದೆ.
ಪಂ.ಪ್ರವೀಣಗೋಡಖಿಂಡಿ ಮೊದಲಬಾರಿಗೆ ರಚಿತವಾಗಿರುವನಾಟಕದ ತಾಲೀಮು ನಡೆಯುತ್ತಿದ್ದು,ಜೂ.12 ಮತ್ತು 13ರಂದುಎನ್.ಆರ್.ಕಾಲೊನಿಯಲ್ಲಿರುವಡಾ.ಸಿ.ಅಶ್ವತ್ಥಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಕೇವಲಎರಡು ಪಾತ್ರಗಳಿರುವ,ಸಂಗೀತ ಮತ್ತುಹಾಸ್ಯದ ಜುಗಲಬಂದಿಯಲ್ಲಿಅನಾವರಣಗೊಳ್ಳುವ ಈ ನಾಟಕ ಸಂಗೀತವನ್ನೇಬದುಕನ್ನಾಗಿಸಿಕೊಂಡಿರುವಬ್ರಹ್ಮಚಾರಿ ಸಂಗೀತಗಾರ ಪ್ರದೀಪಬಾಡಗಂಡಿ ಮತ್ತು ಹೆಂಡತಿಯಿಂದದೂರವಾಗಿ ಯಾವುದೋ ಕಾರಣಕ್ಕಾಗಿಸಂಗೀತ ಕಲಿಯಲು ಅವರ ಬಳಿ ಬರುವಕಿಟ್ಯಾ ಇವರ ನಡುವಿನ ಬದುಕಿನಸತ್ಯಗಳು ಮತ್ತು ಸಮಕಾಲೀನಸಂಗತಿಗಳನ್ನು ಅತ್ಯಂತ ನವಿರಾಗಿರಂಗದ ಮೇಲೆ ತೆರೆದಿಡುವ ಪ್ರಯತ್ನವಾಗಿದೆ.
ಸ್ವತಃಪ್ರವೀಣ್ ಗೊಡ್ಖಿಂಡಿ ಮತ್ತುಅನುಭವಿ ರಂಗಕರ್ಮಿ ರವಿ ಕುಲಕರ್ಣಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಹಿರಿಯ ರಂಗಕರ್ಮಿಡಾ.ಯಶವಂತಸರದೇಶಪಾಂಡೆ ಅವರ ಮಾರ್ಗದರ್ಶನಮತ್ತು ಅಭಿನಯದಲ್ಲಿ ಮೂಡಿಬರಬೇಕಾಗಿದ್ದ ನಾಟಕ ಅವರ ಅಗಲುವಿಕೆಯಿಂದಮೂಂದೂಡಲ್ಪಟ್ಟಿತ್ತು.ಜೂ.13ಸರದೇಶಪಾಂಡೆಯವರಜನ್ಮದಿನವಾದ ಕಾರಣ ಜೂ.12ಮತ್ತು 13ರಂದು ಸಂಜೆ6.30ಕ್ಕೆಪ್ರಧರ್ಶನಗೊಳ್ಳುತ್ತಿದೆ.