ಮಾಜಿ ಸಂಸದ ಪ್ರತಾಪ್ ಸಿಂಹ  
ರಾಜ್ಯ

ಕಾಂಗ್ರೆಸ್‌ ತಿಗಣೆಗಳು ಈಗ ಜಿರಲೆಗಳ ಜತೆ ಸೇರಿವೆ: ಮಾಜಿ ಸಂಸದ ಪ್ರತಾಪ್​ ಸಿಂಹ ವ್ಯಂಗ್ಯ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್​ ತಿಗಣೆಗಳು ಸಿಜೆಪಿ ಜಿರಲೆಗಳ ಜೊತೆ ಸೇರಿವೆ
  • ಸಿಜೆಪಿ ಪಕ್ಷದೊಂದಿಗೆ ಸೇರಿರುವ ಕಾಂಗ್ರೆಸ್​ ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯ
ಮೈಸೂರು: ಕಾಂಗ್ರೆಸ್‌ನ ತಿಗಣೆಗಳು ಈಗ ಜಿರಲೆಗಳ ಜತೆಗೆ ಸೇರಿಕೊಂಡಿವೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಎಡಬಿಡಂಗಿಗಳು. ಕಾಂಗ್ರೆಸ್‌ನವರು ರಕ್ತ ಹೀರುವ ತಿಗಣೆಗಳ ರೀತಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಬಿಜೆಪಿ ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಬೇಕಿದ್ದರೆ ಸಂಸತ್ ಅಧಿವೇಶನಲ್ಲಿ ಮಾತನಾಡಿ ತಮ್ಮ ಅಭಿಪ್ರಾಯ ಮಂಡನೆ ಮಾಡಲಿ. ಅದನ್ನು ಬಿಟ್ಟು ಕಾಕ್ರೊಜ್ ಜನತಾ ಪಾರ್ಟಿಯೊಂದಿಗೆ (ಸಿಜೆಪಿ) ಏಕೆ ಸೇರಿಕೊಂಡಿದ್ದಾರೆ. ಇಲ್ಲಿ ಜಿರಳೆಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಗಲಾಟೆ ಮಾಡಿಸುವ ಹುನ್ನಾರ ನಡೆದಿದೆ ಎಂದರು.
ಇದರ ಹಿಂದೆ ಅಮೆರಿಕನ್ ಡೀಪ್ ಸ್ಟೇಕ್‌ನ ಪಾತ್ರವಿದೆ. ಕಾಂಗ್ರೆಸ್‌ನವರು ಅಮೆರಿಕಾದ ಏಜೆಂಟ್ ಆಗಿದ್ದಾರೆ. ಅವರ ಅಜೆಂಡಾವನ್ನು ಇಲ್ಲಿ ಜಾರಿಗೊಳಿಸಲು ಹೊರಟಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದರಿಂದ ನಮಗೂ ಬಹಳ ಬೇಸರವಿದೆ. ಯಾರು ತಪ್ಪು ಮಾಡಿದ್ದಾರೋ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ ಮುಂದಾಗಿದ್ದಾರೆ. ಕೋಚಿಂಗ್ ಮಾಫಿಯಾದವರು ಇದರಲ್ಲಿ ಇದ್ದಾರೆ ಎಂದು ಹೇಳಿದರು.