ಪ್ರಕಾಶಕರ ಸಂಘದ ಪ್ರಶಸ್ತಿ ಪುರಸ್ಕೃತರು 
ರಾಜ್ಯ

ಪ್ರಕಾಶಕರ ಸಂಘದಿಂದ ಪ್ರಶಸ್ತಿ ಪ್ರಕಟ

ಪ್ರಮುಖ ಮುಖ್ಯಾಂಶಗಳು

  • * ಪ್ರಶಸ್ತಿಗಳು ಕ್ರಮವಾಗಿ 10 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿವೆ
ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ 2025ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ‘ಸಾಹಿತ್ಯ ರತ್ನ ಪ್ರಶಸ್ತಿ’ಗೆ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರ ‘ಮಿಮಾಂಸೆ’ ಕೃತಿ ಹಾಗೂ ‘ಯುವ ಸಾಹಿತ್ಯ ರತ್ನ ಪ್ರಶಸ್ತಿ’ಗೆ ಲೇಖಕ ಅನಂತ ಕುಣಿಗಲ್ ಅವರ ‘ಆಕ್ರಮಣ’ ಕೃತಿ ಆಯ್ಕೆ ಮಾಡಲಾಗಿದೆ.
‘ಪುಸ್ತಕ ರತ್ನ ಪ್ರಶಸ್ತಿ’ಗೆ ಎಚ್.ಕೆ. ಲಕ್ಷ್ಮೀನಾರಾಯಣ ಅಡಿಗ ಅವರ ‘ಐ.ಬಿ.ಎಚ್. ಪ್ರಕಾಶನ’ ಸಂಸ್ಥೆ ಹಾಗೂ ‘ಮುದ್ರಣ ರತ್ನ ಪ್ರಶಸ್ತಿ’ಗೆ ಭಾರತೀಯ ಭಾಷಾಗಣಕ ಪಿತಾಮಹ ಡಾ. ಕೆ.ಪಿ. ರಾವ್ ಮತ್ತು ಶ್ರೀ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್‌ನ ಸಿ.ಆರ್. ಜನಾರ್ದನ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗಳು ಕ್ರಮವಾಗಿ 10 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿವೆ. ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ತಿಳಿಸಿದ್ದಾರೆ.