ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೆಶೀಲ ಅಭಿನಂದನೆ ಗ್ರಂಥವನ್ನು ಶಂಕರ ಡಾಂಗೆ ಲೋಕಾರ್ಪಣೆ ಮಾಡಿದರು. ತಹಸೀಲ್ದಾರ್​ ನೀಲಪ್ರಭಾ ಬಬಲಾದ, ಎಸ್​.ಎಸ್​.ಬನ್ನಕಟ್ಟಿ, ಮರಿಯಪ್ಪ ಹಳ್ಳಿ ಇತರರಿದ್ದರು. 
ರಾಜ್ಯ

ಶಿಕ್ಷಕರ ಮೇಲಿನ ಗೌರವದ ಸಂಕೇತ ಪ್ರಜ್ಞೇಶಿಲ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ನೀಲಪ್ರಭ ಅನಿಸಿಕೆ
  • ಶಹಾಬಾದ್​ನಲ್ಲಿ ಅಭಿನಂದನೆ ಸಮಾರಂಭ
ಶಹಾಬಾದ್​: ತಮ್ಮ ವೃತ್ತಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರಿಂದ ಕಲಿತ ವಿದ್ಯಾರ್ಥಿಗಳು ಇಂದು ದೊಡ್ಡ ಹುದ್ದೆ ಪಡೆದುಕೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮೇಲಿಟ್ಟ ಗೌರವದ ಸಂಕೇತ ಪ್ರಜ್ಞೇಶಿಲ ಅಭಿನಂದನೆ ಗ್ರಂಥವಾಗಿದೆ ಎಂದು ತಹಸೀಲ್ದಾರ್​ ನೀಲಪ್ರಭ ಬಬಲಾದ ಹೇಳಿದರು.
ರಾಯಲ್​ ಗಾರ್ಡನ್​ ಕಲ್ಯಾಣ ಮಂಟಪದಲ್ಲಿ ಗಿರಿಸಿರಿ ಸಂಸತಿಕ ಕಲಾ ಸಂಸ್ಥೆ ಹಾಗೂ ಹೆಬ್ಬಾಳಕರ ಅಭಿಮಾನ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ಶಿಕ್ಷಕ ಶಿವಲಿಂಗಪ್ಪ ಹೆಬ್ಬಾಳಕರ ಅವರಿಗೆ ಅಭಿನಂದನೆ ಹಾಗೂ ಪ್ರೆಶೀಲ ಅಭಿನಂದನೆ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ಡಾಂಗೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಪ್ರಾಧ್ಯಾಪಕ ಡಾ.ಕರಿಗೂಳೇಶ್ವರ ಉಪನ್ಯಾಸ ನೀಡಿದರು. ಅಣದೂರಿನ ಭಂತೆ ವರಜ್ಯೋತಿ ಥೇರೋ ಸಾನ್ನಿಧ್ಯ, ಎಸ್​.ಎಸ್​.ಬನ್ನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ, ಪ್ರಮುಖರಾದ ಮರಿಯಪ್ಪ ಹಳ್ಳಿ, ಸುರೇಶ ಮೆಂಗನ, ಮಲ್ಲಯ್ಯ ಗುತ್ತೇದಾರ್​, ವಿಜಯಕುಮಾರ ಹಂಚನಾಳ, ಶರಣಬಸಪ್ಪ ಧನ್ನಾ, ಮನೀಷ ಜಾಜಿ, ಶಿವಲಿಂಗಪ್ಪ ಹೆಬ್ಬಾಳಕರ, ಶರಣಗೌಡ ಪಾಟೀಲ್​, ರಾಜೇಶ ಯನಗುಂಟಿಕರ, ಭೀಮಯ್ಯ ಗುತ್ತೇದಾರ್​, ಗಿರಿಮಲ್ಲಪ್ಪ ವಳಸಂಗ, ನರಸಪ್ಪ ಕಿಲ್ಲನಕೇರಾ, ಪರಶುರಾಮ ಚಲವಾದಿ, ಮೋಹನ ಹಳ್ಳಿ, ಶಂಕರ ಜಾನಾ, ಭರತ ಧನ್ನಾ, ಮಲ್ಲಣ್ಣ ಮರತೂರ, ಶರಣು ನಾಟೀಕರ, ಉದಯ ಯನಗುಂಟಿ, ಅಶೋಕ ಪೂಜಾರಿ, ಅರ್ಚನಾ ಇತರರಿದ್ದರು. ಮರಲಿಂಗ ಯಾದಗಿರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅರವಿಂದ ಬಿಳಾರ ಸ್ವಾಗತ ಗೀತೆ ಹಾಡಿದರು. ಪ್ರವಿಣ ರಾಜನ ನಿರೂಪಣೆ ಮಾಡಿದರು. ಪೂಜಪ್ಪ ಮೇತ್ರಿ ಸಂವಿದಾನ ಪೀಠಿಕೆ ಓದಿದರು. ಅನೀಲ ಮೈನಾಳಕರ ವಂದಿಸಿದರು.