Pradeep Eshwar should withdraw his statement. 
ರಾಜ್ಯ

ಪ್ರದಿಪ್​ ಈಶ್ವರ್​ ಹೇಳಿಕೆ ವಾಪಸ್​ ಪಡೆಯಲಿ

ಚಿಕ್ಕಬಳ್ಳಾಪುರ ಡೆಸ್ಕ್

ಬಾಗೇಪಲ್ಲಿ:

ಶಾಸಕ ಪ್ರದಿಪ್​ ಈಶ್ವರ್​ ಬಿಜೆಪಿಗರನ್ನು ನಾಮರ್ಧರೆಂದು ನೀಡಿರುವ ಹೇಳಿಕೆ ವಾಪಸ್​ ಪಡೆದು ಕ್ಷಮೆ ಕೋರದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಎಚ್ಚರಿಕೆ ನೀಡಿದರು.

ನರೇಂದ್ರ ಮೋದಿ ಸುದೀರ್ ಕಾಲ ಪ್ರಧಾನಿ ಆಗಿರುವ ಹಾಗೂ ಬಿ.ಎಸ್​.ಯಡಿಯೂರಪ್ಪ 50 ವರ್ಷ ರಾಜಕೀಯ ಪಯಣ ಪೂರೈಸಿರುವ ಹಿನ್ನೆಲೆಯಲ್ಲಿ ನಲ್ಲಪರೆಡ್ಡಿಪಲ್ಲಿಯಲ್ಲಿ ಆಯೋಜಿಸಿದ್ದ ನಮೋ ಬಿಎಸ್​ವೈ ಕ್ರಿಕೆಟ್​ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಯುವಕರಲ್ಲಿನ ಪ್ರತಿಭೆಯನ್ನು ಗುರುತಿಸುವ ಉದ್ದೇಶಕ್ಕಾಗಿ ನಮೋ ಬಿಎಸ್​ವೈ ಕ್ರಿಕೆಟ್​ ಟೂರ್ನಿ ಕಪ್​ ಪಂದ್ಯಾವಳಿಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಆಯೋಜಿಸಲಾಗಿದೆ, ಗ್ರಾಪಂ ಮಟ್ಟದ ಗೆದ್ದಂತಹ ತಂಡಗಳನ್ನು ತಾಲೂಕುಮಟ್ಟದಕ್ಕೆ ಆಯ್ಕೆ ಮಾಡಲಾಗುತ್ತದೆ.

— ಚಿನ್ನಪೂಜಪ್ಪ, ಅಧ್ಯಕ್ಷರು, ಬಿಜೆಪಿ ಎಸ್ಸಿ ಮೋರ್ಚಾ

ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಟನೆ ಮಾಡಿರುವ ಕಾರ್ಯಕರ್ತರು, ಅಭಿಮಾನಿಗಳು ಬರ ಅಧ್ಯಯನ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸುತ್ತಿದ್ದ ಬಿ.ಎಸ್​.ವಿಜಯೇಂದ್ರಗೆ ಸ್ವಾಗತ ಕೋರಿರುವ ೆ್ಲೆಕ್ಸ್​ ಅಳವಡಿಸಿದ್ದರೆ, ಅದನ್ನು ಸಹಿಸಲಾರದ ಶಾಸಕ ಪ್ರದಿಪ್​
ಈಶ್ವರ್​ ್ಲೆಕ್ಸ್​ ಅಳವಡಿಸಿರುವ ವಿಚಾರವಾಗಿ ಬಿಜೆಪಿಗರು ನಾಮರ್ಧರೆಂದು ಉದ್ದಟತನದ ಹೇಳಿಕೆ ನೀಡಿರುವುದು ಖಂಡನೀಯ.
ರಾಜ್ಯದಲ್ಲಿ ಅವರದೇ ಸರ್ಕಾರ ಆಡಳಿತ ನಡೆಸುತ್ತಿದೆ, ೆ್ಲೆಕ್ಸ್​ ಅಳವಡಿಸದಂತೆ ಕಾನೂನು ಜಾರಿಗೆ ತಂದು ್ಲೆಕ್ಸ್​ಗಳನ್ನು ಬ್ಯಾನ್​ ಮಾಡಲಿ, ಅದಕ್ಕೆ ಆೇಪ ಇಲ್ಲ. ಕೇಂದ್ರ ಸಚಿವ ಎಚ್​.ಡಿ.ಕುಮಾರ ಸ್ವಾಮಿ ವಿರುದ್ಧ ಮಾತಾಡಿ, ಚಿಕ್ಕಬಳ್ಳಾಪುರ ಜನತೆಯಿಂದ ಛೀಮಾರಿ ಹಾಕಿಸಿಕೊಂಡರೂ ನಿಮಗೆ ಬುದ್ಧಿ ಬಂದಿಲ್ಲ ಎಂದರು.
ಚಿಕ್ಕಬಳ್ಳಾಪುರ ೇತ್ರವನ್ನು ಮಾದರಿ ೇತ್ರವನ್ನಾಗಿ ಅಭಿವೃದ್ಧಿ ಮಾಡಿದ್ದೇನೆ, ಜನ ನನ್ನನ್ನು ಗೆಲ್ಲಿಸುತ್ತಾರೆಂದು ನಂಬಿರುವ ಡಾ.ಕೆ.ಸುಧಾಕರ್​ ಚುನಾವಣಾ ಸಮಯದಲ್ಲಿ ರ್ನಿಲಕ್ಷ$್ಯ ತೋರಿದ ಕಾರಣಕ್ಕೆ ನಿಮಗೆ ಅನಿವಾರ್ಯವಾಗಿ ಶಾಸಕ ಸ್ಥಾನ ಸಿಕ್ಕಿದೆ, ಪಕ್ಷ ಸಂಟನೆ ಮಾಡದೆ ಅಧಿಕಾರ ಸಿಕ್ಕಿರುವ ನೀವು ಶಾಸಕ ಸ್ಥಾನದ ಗೌರವ ಕಾಪಾಡಿಕೊಳ್ಳುವಂತಹ ಹೇಳಿಕೆಗಳನ್ನು ಕೊಟ್ಟು ೇತ್ರದ ಜನತೆಗೆ ಪ್ರೇರಣೆ ಆಗಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಮುನಿರಾಜು ಎಚ್ಚರಿಕೆ ನೀಡಿದರು.
ಬಿಜೆಪಿ ಮಂಡಲಾಧ್ಯಕ್ಷ ಆರ್​.ಪ್ರತಾಪ್​, ಎಸ್ಸಿ ಮೋರ್ಚಾ ಅಧ್ಯಕ್ಷ ಚಿನ್ನಪೂಜಪ್ಪ, ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮುಖಂಡರಾದ ಅಮರೇಶ್​, ದೇವರಾಜು, ಪೊಲೀಸ್​ ಸೀನಪ್ಪ, ಲೋಕೇಶ್​, ಜಿಲಾರ್ಜಿಲ ರಾಜು, ಶ್ರೀನಾಥರೆಡ್ಡಿ, ಕೃಷ್ಣಪ್ಪ, ರಮೇಶ್​, ಮೋಹನ್​, ರಾಮಂಜಿ, ಚಿನ್ನೇಪಲ್ಲಿ ಶ್ರೀನಿವಾಸ್​, ವೆಂಕಟಶಿವಪ್ಪ ಇದ್ದರು.