Pradeep Eshwar  
ರಾಜ್ಯ

'ನಾನು ಕರ್ನಾಟಕದ ಟ್ರೋಲ್​​ ಪೇಜ್​ಗಳ​ ಪಾಲಿನ ಕ್ರಶ್'​​: ಪ್ರದೀಪ್​​ ಈಶ್ವರ್​​...Pradeep Eshwar

ಪ್ರಮುಖ ಮುಖ್ಯಾಂಶಗಳು

  • ಸಚಿವನಾಗುವ ಆಸೆಯಿದೆ ಆದರೆ, ಅಧಿಕಾರದ ದಾಹವಿಲ್ಲ ಎಂದ ಪ್ರದೀಪ್​ ಈಶ್ವರ್​
  • ಒಬಿಸಿ ನಾಯಕ ಹರಿಪ್ರಸಾದ್​ರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ
  • ನಾನು ಟ್ರೋಲ್​ ಪೇಜಸ್​ಗಳಿಗೆ ಕ್ರಶ್ ಇದ್ದಂತೆ ಎಂದ ಶಾಸಕ
ಬೆಂಗಳೂರು: ಸದಾ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿಯಾಗು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಸದ್ಯ ಕರ್ನಾಟಕದ ಕಾಂಗ್ರೆಸ್​ ಸರ್ಕಾರದಲ್ಲಿ ಸಚಿವರ ಪಟ್ಟಕ್ಕಾಗಿ ಲಾಬಿ ನಡೆಯುತ್ತಿರುವ ಹೊತ್ತಲ್ಲೇ, 'ನಾನು ಒಬಿಸಿ ಹುಡುಗ, ಸಚಿವನಾಗುವ ಆಸೆ ಇದೆ ಆದರೆ ಅಧಿಕಾರದ ದಾಹ ಇಲ್ಲ' ಎಂದು ಕೊಟ್ಟಿರುವ ಹೇಳಿಕೆಯು ವೈರಲ್​ ಆಗಿದೆ.

ಬಾವನತ್ಮಕ ಕ್ಷಣದಲ್ಲಿ ಏನು ಮಾತಾಡ್ಲಿ

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ದಿನದಂದು ಶಾಸಕ ಪ್ರದೀಪ್​ ಈಶ್ವರ್​ ಅವರು ಕಾರಿನಿಂದ ಹೊರಗೆ ಬರದೆ, ಸೈಲಂಟಾಗಿ ಕಾರಿನಿಂದ ಇಳಿಯದೆ ಕುಳಿತಿದ್ದರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸೋಶಿಯಲ್​​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗುತ್ತಿದೆ ಎನ್ನುವ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ನಾನು ಕರ್ನಾಟಕದಲ್ಲಿರುವ ಟ್ರೋಲ್​ ಪೇಜ್​ಗಳಿಗೆ ಕ್ರಶ್​' ಎಂದು ನಗೆಚಟಾಕಿ ಬೀಸಿದರು.
'ಪಕ್ಷದ ಹಿರಿಯ ನಾಯಕ ರಾಜೀನಾಮೆ ಕೊಟ್ಟಿದ್ದರು. ಹೊಸ ನಾಯಕ ಗದ್ದುಗೆ ಏರುವ ಸಮಯದಲ್ಲಿ ನಾನೇನು ಮಾತನಾಡಲು ಸಾಧ್ಯ. ಅದೊಂದು ಭಾವನಾತ್ಮಕ ಕ್ಷಣ. ನಾನು ಯಾವುದೇ ವಿಚಾರವಾಗಿ ಮಾತನಾಡಿದರು ತಪ್ಪಾಗಿ ಅರ್ಥ ಮಾಡಿಕೊಂಡು ಪ್ರಸಾರ ಮಾಡುತ್ತೀರಿ ಆ ಕಾರಣದಿಂದ ನಾನು ಅಂದು ಮಾತನಾಡೋಕೆ ಹೋಗಿಲ್ಲ ಸುಮ್ಮನಿದ್ದೆ'ಎಂದರು.

ಸಚಿವನಾಗುವ ಆಸೆ ಇದೆ

ಸಚಿವ ಸ್ಥಾನದ ಬಗ್ಗೆ ಮಾತನಾಡಿದ ಅವರು, 'ನನಗೆ ಸಚಿವನಾಗಿ ಕಾರ್ಯ ನಿರ್ವಹಿಸಬೇಕೆನ್ನೆವು ಆಸೆಯಿದೆ. ಆದರೆ, ಅಧಿಕಾರದ ಆಸೆಯಿಲ್ಲ, ಕೊಟ್ಟರೂ ಓಕೆ ಕೊಡದಿದ್ದರೂ ಸರಿ. ನಾವು ಪಕ್ಷದ ಸಿದ್ಧಾಂತಕ್ಕೆ ಬದ್ಧರು. ಒಬಿಸಿ ಹುಡುಗನಾದ ನಾನು ರಾಜ್ಯದಲ್ಲಿ ಹೋರಾಟ ಬಲ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಹೋರಾಟವನ್ನು ಇನ್ನಷ್ಟು ಬಲಪಡಿಸುವ ಕೆಲಸ ಮಾಡ್ತೇನೆ' ಎಂದು ಹೇಳಿದರು.
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಕೆ ಹರಿಪ್ರಸಾದ್​ರಿಗೆ ಅಭಿನಂದನೆ ಸಲ್ಲಿಸಿದ ಅವರು, ಪ್ರಭಾವಿ ಒಬಿಸಿ ನಾಯಕನಿಗೆ ಅತ್ಯನ್ನತ ಸ್ಥಾನವನ್ನು ನೀಡಿ ಗೌರವಿಸಿರುವುದಕ್ಕೆ ಧನ್ಯವಾದ. ಕಾಂಗ್ರೆಸ್​ ಹಿಂದುಳಿದ ವರ್ಗಗಳಿಗೆ ಸೂಕ್ತವಾದ ಪ್ರಾತಿನಿಧ್ಯ ನೀಡುತ್ತಿದೆ ಎಂದರು, (ಏಜೆನ್ಸೀಸ್).