Vishwanath Bhaskar  
ರಾಜ್ಯ

ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್; ವಿಶ್ವನಾಥ್ ಭಾಸ್ಕರ್ ಮತ್ತೊಂದು ದಾಖಲೆ Vishwanath Bhaskar

ಪ್ರಮುಖ ಮುಖ್ಯಾಂಶಗಳು

  • ಪವರ್‌ಲಿಫ್ಟಿಂಗ್ ನಲ್ಲಿ ವಿಶ್ವನಾಥ್ ಭಾಸ್ಕರ್ ಮತ್ತೊಂದು ದಾಖಲೆ
  • ಡೆಡ್‌ಲಿಫ್ಟ್ ವಿಭಾಗದಲ್ಲಿ 327.5 ಕೆಜಿ ತೂಕವನ್ನು ಎತ್ತುವ ಮೂಲಕ ಸಾಧನೆ
  • ಮಂಗಳೂರು ನಗರದ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದ್ದ ಸ್ಪರ್ಧೆ
  • ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿಶ್ವನಾಥ ಭಾಸ್ಕರ್ ಗಾಣಿಗ
ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪವರ್‌ಲಿಫ್ಟರ್ ವಿಶ್ವನಾಥ್ ಭಾಸ್ಕರ್ ಗಾಣಿಗ ಮತ್ತೊಂದು ದಾಖಲೆ ಮಾಡಿದ್ದಾರೆ.
ಮಂಗಳೂರು ನಗರದ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್ 24ರಿಂದ 28ರವರೆಗೆ ಈ ಚಾಂಪಿಯನ್‌ಷಿಪ್ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿಶ್ವನಾಥ ಭಾಸ್ಕರ್ ಗಾಣಿಗ ಅವರು ಡೆಡ್‌ಲಿಫ್ಟ್ ವಿಭಾಗದಲ್ಲಿ ತಮ್ಮದೇ ಹಳೆಯ 318 ಕೆ.ಜಿ. ದಾಖಲೆಯನ್ನು ಮುರಿದು 327.5 ಕೆಜಿ ತೂಕವನ್ನು ಎತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರು ಕುಂದಾಪುರದ ಬಾಳಿಕೇರಿ ಗ್ರಾಮದ ಭಾಸ್ಕರ್ ಗಾಣಿಗ ಅವರ ಪುತ್ರರಾಗಿದ್ದು, ಬೆಂಗಳೂರಿನ ಬಾಲಾರ್ಕ ಫಿಟ್ನೆಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.