ಕೆಂಭಾವಿ ಹಿರೇಮಠ ಸಂಸ್ಥಾನದಲ್ಲಿ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದದಿಂದ ಶುಕ್ರವಾರ ಸಂಜೆ ಹಮ್ಮಿಕೊಂಡ ಶಿವಾನುಭವ, ಸಂಗೀತ ಗೋಷ್ಠಿ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಶಾಸಿ ಉದ್ಘಾಟಿಸಿದರು. ಶ್ರೀ ಚನ್ನಬಸವ ಶಿವಾಚಾರ್ಯ, ಡಾ.ಯಂಕನಗೌಡ, ಸೋಮನಾಥ, ಯಮುನೇಶ ಇತರರಿದ್ದರು. 
ರಾಜ್ಯ

ದೇವರ ಸ್ಮರಣೆಗೆ ಬಡತನ ಅಡ್ಡಿಯಾಗದು

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಶಾಸ್ತ್ರಿ ಅಭಿಮತ
  • ಕೆಂಭಾವಿಯಲ್ಲಿ ಮಾಸಿಕ ಶಿವಾನುಭವಗೋಷ್ಠಿ
ಕೆಂಭಾವಿ: ದೇವರ ಸ್ಮರಣೆಗೆ ಯಾವತ್ತೂ ಬಡತನ ಅಡ್ಡಿಯಾಗುವುದಿಲ್ಲ ಎಂದು ಯಾದಗಿರಿಯ ಮಲ್ಲಿಕಾರ್ಜುನ ಶಾಸಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಶುಕ್ರವಾರ ಸಂಜೆ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ, ಸಂಗೀತ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಜಗದ ಜನರು ದೇವರ ಜಪಿಸುವ ಮಹದಾಸೆ ಇಟ್ಟುಕೊಂಡು ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ನಡೆಸುತ್ತಿರುವ ಶ್ರೀ ಚನ್ನಬಸವ ಶಿವಾಚಾರ್ಯರ ಕಾರ್ಯ ಶ್ಲಾನೀಯ. ಹೀಗಾಗಿ ದೇವರ ಸ್ಮರಣೆಗೆ ಎಂದಿಗೂ ಬಡತನ ಅಡ್ಡಿಯಾಗದು ಎಂದು ಹೇಳಿದರು.
ಬಡವರ ಸೇವೆ, ರೋಗಿಯ ಆರೈಕೆ, ಮಾತಾಪಿತರ ಸನ್ನಿಧಿಯಲ್ಲಿ ಹೀಗೆ ಜಗದಗಲ, ಮುಗಿಲಗಲ, ಪ್ರತಿಯೊಂದು ವಸ್ತುವಿನಲ್ಲಿ ದೇವರಿದ್ದಾನೆ. ಭಗವಂತನ ಸಾಾತ್ಕಾರಕ್ಕೆ ಬಡತನ ಅಡ್ಡಿಯಾಗದು. ಹಿರೇಮಠ ಸಂಸ್ಥಾನದಲ್ಲಿ ಜರುಗುವ ಮಾಸಿಕ ಹುಣ್ಣಿಮೆಯ ಶಿವಾನುಭವ ಮತ್ತು ಸಂಗೀತ ಗೋಷ್ಠಿ ಸಂಸಾರದಿಂದ ಸದ್ಗತಿ ಹೊಂದಲು ಇದೊಂದು ಪ್ರೇರಣೆಯಾಗಿದ್ದು, ಭಕ್ತರು ಇದರ ಲಾಭ ಪಡೆದುಕೊಂಡು ಎಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಮನವಿ ಮಾಡಿದರು.
ಪೀಠಾದಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಆಶಿರ್ವಚನ ನೀಡಿ, ದಂಡ ವಿಧಿಸುವ ಅಧಿಕಾರ ಇದ್ದರೂ ದಂಡ ವಿಧಿಸದ ದಯಾಳುವೆ ಗುರು. ದೇವ ಸ್ವರೂಪರು, ಲಿಂಗಾಂಗ ಸಾಮರಸ್ಯದ ಸಾಧು ಸಂತರು, ದಾಸ ಶ್ರೇಷ್ಠರು, ಮಹಾತ್ಮರು, ಶಿವಶರಣರು. ಇವರೆಲ್ಲರು ತೋರಿದ ಮಾರ್ಗದಲ್ಲಿ ಸಾಗಿದರೆ ಬದುಕು ಸಾರ್ಥಕವಾಗಲಿದೆ ಎಂದರು.
ಸೋಮನಾಥ ಯಾಳಗಿ, ಯಮನೇಶ ಯಾಳಗಿ ಹಾಗೂ ಶಶಿಧರ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಪ್ರಮುಖರಾದ ನಿಂಗನಗೌಡ ದೇಸಾಯಿ, ನಿಜಗುಣ ವಿಶ್ವಕರ್ಮ ಸೇರಿದಂತೆ ಮಹಿಳೆಯರು, ಮಕ್ಕಳು, ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಉಪಸ್ಥಿತರಿದ್ದರು. ಡಾ ಯಂಕನಗೌಡ ಪಾಟೀಲ್​ ನಿರೂಪಣೆ ಮಾಡಿದರು.