ಯಾದಗಿರಿ ನಗರದ ಶ್ರೀ ಹರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕಾಲೇಜು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಧರ್ಮದರ್ಶಿ ಪಿ.ವೇಣುಗೋಪಾಲ ಉದ್ಘಾಟಿಸಿದರು. ಪತ್ರಕರ್ತ ಶಂಕ್ರಪ್ಪ ಅರುಣಿ, ಚಂದ್ರಕಾಂತ ವಂಕಮನಿ ಅಧ್ಯ ಸುಭಾಷಚಂದ್ರ ಮಾನೇಗಾರ, ಯಲ್ಲಪ್ಪ, ಬಸವರಾಜ ಜುಗೇರಿ ಇತರರಿದ್ದರು. 
ರಾಜ್ಯ

ಜ್ಞಾನಾರ್ಜನೆಗೆ ಅಡ್ಡಿಯಾಗದು ಬಡತನ

ಪ್ರಮುಖ ಮುಖ್ಯಾಂಶಗಳು

  • ಧರ್ಮದರ್ಶಿ ಪಿ.ವೇಣುಗೋಪಾಲ ಹೇಳಿಕೆ
  • ಶ್ರೀ ಹರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಗತ ಸಮಾರಂಭ
ಯಾದಗಿರಿ: ಮಾನಸಿಕ ಧೀರತ್ವದ ಸಿರಿತನವಿದ್ದರೆ ಆರ್ಥಿಕ ಬಡತನ ಾನಾರ್ಜನೆಗೆ ಅಡ್ಡಿಯಾಗುವುದಿಲ್ಲ. ಕೌಟಂಬಿಕ ಆರ್ಥಿಕ ಸಮಸ್ಯೆ ಅರಿತುಕೊಂಡು ಅವುಗಳನ್ನು ಪರಿಹರಿಸಬೇಕೆಂಬ ಛಲ ನಮ್ಮಲ್ಲಿ ಮೂಡಿದಾಗ ಮಾತ್ರ ಅಭ್ಯಾಸದ ಮೇಲೆ ಆಸಕ್ತಿ ಮೂಡಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಧರ್ಮದರ್ಶಿ ಪಿ.ವೇಣುಗೋಪಾಲ ಹೇಳಿದರು.
ನಗರದ ಶ್ರೀ ಹರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ವಿಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕಾಲೇಜು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಸಕ್ತಿಯಿಂದ ಏಕಾಗ್ರತೆ ಬೆಳೆದು ಉತ್ತಮ ಅಂಕ ಪಡೆದು ಜೀವನದಲ್ಲಿ ಯಶಸ್ಸು ಆಗಲು ಸಾಧ್ಯ ಎಂದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ ವಿದ್ಯಾರ್ಥಿಗಳು ತಾಳ್ಮೆ, ಪರಿಶುದ್ಧತೆ ಮತ್ತು ನಿರಂತರ ಪರಿಶ್ರಮ ಇವು ಸಾಧನೆಗೆ ಮೂರು ಮುಖ್ಯ ಸೂತ್ರಗಳಾಗಿವೆ. ಪಠ್ಯ ಪುಸ್ತಕದ ಅಧ್ಯಯನಗಳ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳು ಮತ್ತು ತಾಂತ್ರಿಕ ವೃತ್ತಿ ಕೌಶಲಗಳನ್ನು ಕಲಿಯುವುದು ಇಂದಿನ ಸ್ಪರ್ಧಾತ್ಮಕ ಪರಿಸರದಲ್ಲಿ ಯಶಸ್ವಿ ಯಾಗುವುದಕ್ಕೆ ಮೂಲ ಕಾರಣ ಎಂದು ಹೇಳಿದರು.
ಪತ್ರಕರ್ತ ಶಂಕ್ರಪ್ಪ ಅರುಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯ. ಕಲಿಕೆಯಲ್ಲಿ ಮೊದಲು ಭಯ, ಹಿಂಜರಿಕೆ ಮನೋಭಾವ ತೆಗೆದು ಹಾಕಬೇಕು. ಓದು ಕಾಟಾಚಾರಕ್ಕಾಗಿ ಆಗಬಾರದು, ಇಷ್ಟಪಟ್ಟು ಓದಬೇಕು. ಭವಿಷ್ಯದಲ್ಲಿ ಏನಾಗುವುದೋ ಎಂತಾಗುವುದೋ ಎಂಬ ನಕಾರಾತ್ಮಕ ಭಾವನೆ ತೆಗೆದುಹಾಕಿ ಯಾವತ್ತೂ ಸಕರಾತ್ಮಕವಾಗಿಯೇ ಚಿಂತನೆ ಮಾಡಬೇಕು. ಈಗಿನಿಂದಲೇ ನೀವು ನಾನಿದನ್ನು ಸಾಧಿಸುತ್ತೇನೆ ಎಂಬ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜು ಆಡಳಿತ ಮಂಡಳಿ ಅಧಿಕಾರಿ ಚಂದ್ರಕಾಂತ ವಂಕಮನಿ ಮಾತನಾಡಿದರು. ಸಂಸ್ಥಾಪಕ ಅಧ್ಯ ಸುಭಾಷಚಂದ್ರ ಮಾನೇಗಾರ ಅಧ್ಯತೆ ವಹಿಸಿದ್ದರು. ಪ್ರಾಂಶುಪಾಲ ಯಲ್ಲಪ್ಪ, ಸಮಾಜಶಾಸ ಉಪನ್ಯಾಸಕ ಬಸವರಾಜ ಜುಗೇರಿ, ಉಪನ್ಯಾಸಕರಾದ ಭೀಮಪ್ಪ ಎಸ್​ಎಂ, ದೇವಪ್ಪ, ಸುಧಾರಾಣಿ, ಪ್ರಿಯಾ, ಸ್ವಾತಿ, ಅಜೀಮ್​, ಆಜ್ರಾ ಪರ್ವಿನ್​ ಸೇರಿದಂತೆಯೇ ಇತರರಿದ್ದರು. ಭ್ಯಾಗ್ಯಶ್ರೀ, ಸಿಂದೂ ಪ್ರಾರ್ಥಿಸಿದರು. ಉಪನ್ಯಾಸಕ ಅಜಿತ್​ಕುಮಾರ್​ ನಿರೂಪಿಸಿ, ವಂದಿಸಿದರು.