ಶಿರಾ ತಾಲೂಕು ಗೋಣಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಮವಸ ವಿತರಿಸಲಾಯಿತು. ಶಾಲಾ ಪ್ರಭಾರ ಮುಖ್ಯಶಿಕ್ಷಕ ಬಾಬು, ರೈತ ಮೋರ್ಚ ಜಿಲ್ಲಾಧ್ಯಕ್ಷ ಪುರುಷೋತ್ತಮ್, ರೈತ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಗೋಣಿಹಳ್ಳಿ ನಾಗರಾಜ್ ಇದ್ದರು.  
ರಾಜ್ಯ

ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ

ತುಮಕೂರು ಡೆಸ್ಕ್

ಬರಗೂರು :

ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಪಡೆದು ಸವಾಜಕ್ಕೆ ಬೆಳಕು ಚೆಲ್ಲಿ ವಾದರಿಯಾಗಬೇಕಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗೋಪಿ ಕುಂಟೆ ಕುವಾರ್ ಹೇಳಿದರು.

ಶಿರಾ ತಾಲೂಕು ಗೋಣಿಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಾತನಾಡಿದ ಅವರು, ಧರ್ಮ ಯಾವುದೇ ಇರಲಿ ಶಿಕ್ಷಣ ಪಡೆಯುವುದು ಅತಿ ಮುಖ್ಯ. ಶ್ರದ್ಧಾ ಭಕ್ತಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಎಂಎಲ್‌ಸಿ ಚಿದಾನಂದ ಎಂ ಗೌಡ ಅವರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ನಿರ್ವಾಣ ವಾಡುವುದರ ಮುಖೇನ ಶಿಕ್ಷಣಕ್ಕೆ ಚೈತನ್ಯ ನೀಡುವ ಮೂಲಕ ಶಿಕ್ಷಣ ಕ್ರಾಂತಿ ವಾಡಿಡದ್ದಾರೆ. ಇದರಂತೆ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ನೀಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ವಾಡಿ ಎಂದರು.
ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ ವಾತನಾಡಿದರು. ಶಾಲಾ ಸಮವಸ ಕೊಡುಗೆ ನೀಡಿದ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಎಂಎಲ್ಸಿ ಚಿದಾನಂದ ಎಂ ಗೌಡ ನೇತೃತ್ವದಲ್ಲಿ ಜಿಲ್ಲಾ ರೈತ ಮೋರ್ಚ್ ಅಧ್ಯಕ್ಷ ಪುರುಷೋತ್ತಮ್ ಮತ್ತು ಉಪಾಧ್ಯಕ್ಷ ಗೋಣಿಹಳ್ಳಿ ನಾಗರಾಜ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್, ಟ್ರ್ಯಾಕ್ ಸೂಟ್ ಮತ್ತು ಟೈ ಬೆಲ್ಟ್ ವಿತರಿಸಲಾಯಿತು.
ರೈತ ಮೋರ್ಚಾ ಗ್ರಾವಾಂತರ ಮಂಡಲ ಅಧ್ಯಕ್ಷ ಪಟೇಲ್ ಈರಣ್ಣ, ಹಿರಿಯ ಮುಖಂಡ ರೇಣುಕಾ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯರಾದ ತಿಪ್ಪಣ್ಣ, ನಾಗೇಂದ್ರಪ್ಪ, ದೇವರಾಜ್ ನಿಂಗಮ್ಮ, ಮೀನಾಕ್ಷಿ, ಚೈತ್ರ, ತಿಪ್ಪಮ್ಮ, ಸಹ ಶಿಕ್ಷಕರಾದ ಸುಧಾಮಣಿ, ಸಿದ್ದೇಶ್, ನಿರಂಜನ್ ಇದ್ದರು.