ನಂಜನಗೂಡು:
ಬಂದು ಎಂಬತ್ತು ವರ್ಷಗಳಾದರೂ ಬಡತನ, ಅಸ್ಪೃಶ್ಯತೆ, ಅಸಮಾನತೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ಶಾಸಕ ದರ್ಶನ್ ಧ್ರುವನಾರಾಯಣ ವಿಷಾದಿಸಿದರು.
ಡಾ. ಅಂಬೇಡ್ಕರ್ ಅವರು ಸಮಾನತೆ ಇಲ್ಲದ ಸ್ವಾತಂತ್ರೃವು ಸ್ವಾತಂತ್ರೃವೇ ಅಲ್ಲ ಎಂದಿದ್ದಾರೆ. ಈ ನಿಟ್ಟಿನಲ್ಲಿ ಯುವಜನಾಂಗ
ಕ್ಕೆ ಅರ್ಥ ತುಂಬಲು ಶ್ರಮಿಸಬೇಕಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಬೆರಳ ತುದಿಯಲ್ಲಿ ಜಗತ್ತಿನ ಎಲ್ಲ ಮಾಹಿತಿ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಯಾವ ರೀತಿಯಲ್ಲಿ ನಿಜವಾದ
ಗಳಿಸಬೇಕು ಎಂಬ ಕುರಿತು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಡಾ.ಸ್ಮಿತಾ ರಾಮು ಮಾತನಾಡಿ, ನಾವೆಲ್ಲರೂ ಸದಾ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿಕೊಂಡು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು. ರಾಜ್ಯ ಮುಕ್ತ ವಿವಿಯ ನಿರ್ದೇಶಕ ಡಾ.ಸಂತೋಷ್ ಕುಮಾರ್ ಪ್ರಧಾನ ಭಾಷಣ ಮಾಡಿದರು.
ಪೊಲೀಸರು ಮತ್ತು ಶಾಲೆ, ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಗೌರವ ವಂದನೆ ಗಮನ ಸೆಳೆಯಿತು. ಗಣ್ಯರು ಗೌರವ ಸೀಕರಿಸಿದರು. ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗುವ ಅವಘಡಗಳ ಕುರಿತು ಜಾಗೃತಿ ಮೂಡಿಸುವ ನೃತ್ಯ ರೂಪಕ ಕಣ್ಮನ ಸೆಳೆಯಿತು.
ಜತೆಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಗೆದ್ದವು.