Pour water into the Nagalamadike dam.
ಪಾವಗಡ: ತಾಲೂಕಿನಲ್ಲಿ ಬೇಸಿಗೆಯ ತೀವ್ರತೆ ಹೆಚ್ಚಾಗಿದ್ದು, ನಾಗಲಮಡಿಕೆ ಡ್ಯಾಂ ಬರಿದಾಗಿದೆ. ಆದ್ದರಿಂದ ಶಾಸಕರು, ತಾಲೂಕು ಆಡಳಿತಾಧಿಕಾರಿಗಳು ಆಂಧ್ರಪ್ರದೇಶದ ಸರ್ಕಾರದೊಂದಿಗೆ ಮಾತುಕತೆ ನಡೆಸಿ ತಕ್ಷಣವೇ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾಲೂಕು ಕಚೇರಿಯ ಗ್ರೇಡ್-&2 ತಹಸೀಲ್ದಾರ್ ಪ್ರಸಾದ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ತಾಲೂಕು ಬೆಟ್ಟ&ಗುಡ್ಡಗಳ ನಾಡಾಗಿದ್ದು ಮಳೆ ಬಾರದೆ ಕೆರೆಕಟ್ಟೆಗಳು ಬರಿದಾಗಿ ಬರದ ನಾಡಾಗಿದೆ. ತಾಲೂಕಿನಾದ್ಯಂತ ಅಂತರ್ಜಲಮಟ್ಟ ಕುಸಿದು ರೈತರ ಬೋರ್ವೆಲ್ಗಳು ಒಂದೊಂದೇ ನಿಂತು ಹೋಗುತ್ತಿವೆ. ಸಾವಿರ ಅಡಿ ಕೊರೆದರೂ ನೀರು ಸಿಗದೇ ರೈತರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ತುಂಗಭದ್ರಾ ನದಿಯ ನೀರು ನಿಂತುಹೋಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಪ್ರಾಣಿ ಪಕ್ಷಿಗಳು ಹಾಗೂ ಜಾನುವಾರುಗಳು ಕುಡಿಯಲು ನೀರಿಲ್ಲದೆ ಬಳಲುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಬೋರ್ವೆಲ್ಗಳು ಬತ್ತಿ ಹೋಗಿ ನೀರಿನ ಆಹಾಕಾರ ಉಂಟಾಗುವ ಮೊದಲು ಆಂಧ್ರಪ್ರದೇಶದ ಸರ್ಕಾದೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ನಾಗಲಮಡಿಕೆ ಡ್ಯಾಂಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವು, ಈರಣ್ಣ, ದುರ್ಗಪ್ಪ, ನಡುಪನ್ನ, ಸಿಕೆಪುರ ಚಿತ್ತಯ್ಯ, ಹನುಮಂತರಾಯಪ್ಪ, ಸಿದ್ದಪ್ಪ, ಸಂಜೀವಪ್ಪ, ಸದಾಶಿವಪ್ಪ, ನಾಗೇಂದ್ರಪ್ಪ, ವೆಂಕಟಸ್ವಾಮಿ, ಲಕ್ಷ$್ಮಣನಾಯ್ಕ, ಕೃಷ್ಣಮೂರ್ತಿ, ಗುಡಿಪಲ್ಲಪ್ಪ, ಆಂಜನೇಯಲು, ಬಸವರಾಜು, ನರಸಿಂಹಮೂರ್ತಿ, ಇನ್ನು ಹಲವು ರೈತರು ಇದ್ದರು.