ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಬಿ.ಎ.ಸೀಮಾ
ಅರಸೀಕೆರೆ: ತಾಲೂಕಿನ ಗಂಡಸಿ, ಬಾಗೇಶಪುರ ಸೇರಿದಂತೆ ವಿವಿಧೆಡೆ ಆಲೂಗಡ್ಡೆ ಬೆಳೆಯುವ ಬೆಳೆಗಾರರು ಬಿತ್ತನೆ ಮಾಡುವಾಗ ಸುಧಾರಿತ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಬಿ.ಎ.ಸೀಮಾ ತಿಳಿಸಿದ್ದಾರೆ.
ಪ್ರತಿ ರೈತರು ಆಲೂಗಡ್ಡೆ ಬಿತ್ತನೆ ಬೀಜವನ್ನು ಪ್ರಮಾಣಿಕೃತ ಸಂಸ್ಥೆಯಿಂದಲೇ ಖರೀದಿಸುವುದು, ಖರೀದಿಸಿದ ಬಿಲ್ಲುಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಬೆಳೆಯನ್ನು ಬೆಳೆಯುವಾಗ ಈ ಕ್ರಮವನ್ನು ಅನುಸರಿಸಬೇಕಿದೆ. ಮೊದಲು ಬಿತ್ತನೆಗೆ 15 ದಿನಗಳ ಮುಂಚಿತವಾಗಿ ಭೂಮಿ ಸಿದ್ಧಗೊಳಿಸಬೇಕು. ಜೈವಿಕಗೊಬ್ಬರ ಮತ್ತು ಸಾವಯವ ಗೊಬ್ಬರದೊಂದಿಗೆ ಜೈವಿಕ ಶಿಲೀಂಧ್ರ ನಾಶಕಗಳ ಮಿಶ್ರಣ ಮಾಡಿ ಮಣ್ಣಿನಲ್ಲಿ ಬೆರೆಸಬೇಕು. ಕೋಲ್ಡ್ ಸ್ಟೋರಿಜಿನಿಂದ ತೆಗೆದ ನಂತರ 10-15 ದಿವಸಗಳ ಕಾಲ ಮಂದ ಬೆಳಕಿನಲಿ ಗಾಳಿಯಾಡುವ ಸ್ಥಳದಲ್ಲಿ ತೆಳ್ಳಗೆ ಹರಡಬೇಕು. ಬಿತ್ತನೆಗೆ ಯೋಗ್ಯವಾದ ಆಲೂಗಡ್ಡೆಯು ಸ್ವಲ್ಪ ಸುಕ್ಕುಗಟ್ಟಿ ಮೃದುವಾಗಿಸಬೇಕು ನಂತರ ಮೊಳಕೆ ಬರಲು ಪ್ರಾರಂಭವಾಗುತ್ತದೆ. ಕತ್ತರಿಸುವ ವೇಳೆ ಕಠಿಣ ಶಬ್ದ ಬಾರದಿರುವುದಂತೆ ಸೂಕ್ತ ತಳಿ ಆಯ್ಕೆ ಮಾಡಬೇಕು.
ಬಿತ್ತನೆ ಸಮಯದಲ್ಲಿ ಮಣ್ಣಿನ ಉಷ್ಣಾಂಶ ಕಡಿಮೆಯಾದ ನಂತರವೇ ಬಿತ್ತನೆ ಮಾಡಬೇಕು. ಮ್ಯಾಂಕೋಜೇಬ್ 4 ಗ್ರಾಂ, ಸ್ಟೇಪ್ಲೋಮೈಸಿನ್ ಸಟ್ 0.5 ಗ್ರಾಂ. ಪ್ರತಿ ಲೀಟರ್ ನೀರಿನ ದ್ರಾವಣದಲ್ಲಿ ಬೀಜೋಪಚಾರ ಮಾಡಿದ ನಂತರವೇ ಬಿತ್ತನೆ ಮಾಡಿ ಪೋಷಿಸುವ ಕಾರ್ಯ ತಪ್ಪದೇ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.