ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪೂಕಳಂ ಸ್ಪರ್ಧೆ ಗಮನ ಸೆಳೆಯಿತು 
ರಾಜ್ಯ

ಗಮನ ಸೆಳೆದ ಪೂಕಳಂ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ
  • ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ
ನಾಪೋಕ್ಲು: ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ ಆಯೋಜಿಸಲಾಗಿತ್ತು.
ಮೂರು ತಂಡಗಳ ನಡುವೆ ಪೂಕಳಂ ಸ್ಪರ್ಧೆ ಅತ್ಯಾಕರ್ಷಕವಾಗಿತ್ತು. ಕಾವೇರಿ, ಗಂಗಾ ಮತ್ತು ಯಮುನಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ ಗಳಿಸಿತು. ಕಾವೇರಿ ತಂಡ ದ್ವಿತೀಯ ಸ್ಥಾನಕ್ಕೆ ಭಾಜನವಾದರೆ ಯಮುನಾ ತಂಡ ದ್ವಿತೀಯ ಸ್ಥಾನ ಗಳಿಸಿತು.
ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸಲು ಮನೆಯ ಮುಂದೆ ಹೂಗಳಿಂದ ವೃತ್ತಾಕಾರದ ವಿನ್ಯಾಸ ಮಾಡುವ ಪೂಕಳಂಗೆ ಶಾಲೆಯಲ್ಲಿ ಮಹತ್ವ ನೀಡಲಾಗಿತ್ತು. ಕೇರಳದ ದೊಡ್ಡ ಹಬ್ಬ ಇದಾಗಿದ್ದು, ಹತ್ತು ದಿನಗಳ ಕಾಲ ವಿವಿಧ ರೀತಿಯ ಹೂವಿನ ರಂಗೋಲಿಯನ್ನು ರಚಿಸಿ ಹಬ್ಬಕ್ಕೆ ಕಳೆ ತುಂಬಲಾಗುತ್ತದೆ.

ಕೊಡಗಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಮಲಯಾಳಿ ಸಮುದಾಯ ಓಣಂ ಅನ್ನು ಅದ್ದೂರಿಯಿಂದ ಆಚರಿಸುತ್ತದೆ. ತುಂಬೆ ಹೂವು, ಚೆಂಡು ಹೂವು, ಮಲ್ಲಿಗೆ, ಕಾಕಡ, ಕನಕಾಂಬರ, ಆಕರ್ಷಕ ಎಲೆಗಳು ಸೇರಿದಂತೆ ಬಗೆಬಗೆಯ ಹೂಗಳಿಂದ ಪೂಕಳಂ ರಚಿಸಲಾಗಿತ್ತು. ಹಳದಿ, ಕೇಸರಿ ,ಬಿಳಿ ಬಣ್ಣಗಳಿಗೆ ಪ್ರಶಸ್ತಿ ನೀಡಲಾಗಿತ್ತು. ನವಿಲು, ದೋಣಿ, ಮಹಾಬಲಿ ಮುಖದ ವಿನ್ಯಾಸಗಳೊಂದಿಗೆ ತಂಡದ ಹೆಸರನ್ನು ಪುಷ್ಪಗಳಿಂದ ರಚಿಸಿ ವೀಕ್ಷಕರ ಗಮನ ಸೆಳೆಯುವಂತೆ ಮಾಡಲಾಗಿತ್ತು.
.