ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ಗ್ರಾಮದ ಚರ್ಚ್​ನಲ್ಲಿ ಮಳೆಗಾಗಿ ಭಾನುವಾರ ರೈತರು ಸಪ್ತಾಹ ಭಜನೆ ಮಾಡಿ ಪ್ರಾರ್ಥಿಸಿದರು. 
ರಾಜ್ಯ

ಮಳೆರಾಯನ ಕೃಪೆಗಾಗಿ ಪೂಜೆ, ಪ್ರಾರ್ಥನೆ

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರದಲ್ಲಿ ಹಲವು ದೇವರಿಗೆ ಜಲಾಭಿಷೇಕ
  • ಭೀಮನಹಳ್ಳಿ ಚರ್ಚ್​ನಲ್ಲಿ ಭಜನೆ
ಚಿತ್ತಾಪುರ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಮಾತ್ರವಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದು, ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಳೆರಾಯನ ಕೃಪೆಗಾಗಿ ದೇವಸ್ಥಾನಗಳಲ್ಲಿ ಜಲಾಭಿಷೇಕ, ಚರ್ಚ್​ಗಳಲ್ಲಿ ಸಪ್ತ ಭಜನೆ ನಡೆಯುತ್ತಿದೆ.
ಪಟ್ಟಣದ ಬಾಹರಪೇಟ ಬಡಾವಣೆ ರೈತರು ಹಾಗೂ ಸಾರ್ವಜನಿಕರು ಶನಿವಾರ ಬೆಳಗ್ಗೆ ವಿವಿಧ ವಾದ್ಯಗಳೊಂದಿಗೆ ನೀರು ತುಂಬಿದ ಬಿಂದಿಗೆಯನ್ನು ಹೊತ್ತು ದೇವಸ್ಥಾನಗಳಿಗೆ ತೆರಳಿಗೆ ವಿಶೇಷ ಜಲಾಭಿಷೇಕ ನೆರವೇರಿದರು. ಮೊದಲು ಪ್ರಾಚಿನ ಕಾಲದ 60 ಕಂಬದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಕಲ್ಪದೊಂದಿಗೆ ಜೀಲಾಭಿಷೇಕ ಕಾರ್ಯ ಶುರು ಮಾಡಿದರು. ಬಳಿಕ ಶಕ್ತಿ ದೇವತೆ ಶ್ರೀ ನಾಗಾವಿ ಯಲ್ಲಮ್ಮ, ಕೊತಲಾಪುರ ಯಲ್ಲಮ್ಮ ದೇವಿ, ಕಳ್ಳಿ ಬಸವೇಶ್ವರ, ಅಕ್ಕಮಹಾದೇವಿ, ಚಿತಾವಲಿ ದರ್ಗಾ, ಹನುಮಾನ ಮಂದಿರ, ಬಸವಣ್ಣ, ಸಂಗಮೇಶ್ವರ, ಶರಣಬಸವೇಶ್ವರ, ಮಲ್ಲಿಕಾರ್ಜುನ ದೇವಸ್ಥಾನ, ಮಹಾನಂದಿ ಬಸವೇಶ್ವರ, ಮರಗಮ್ಮ ದೇವಿ, ಮರುಳಸಿದ್ಧೇಶ್ವರ, ಮೈಲಾರಲಿಂಗೇಶ್ವರ ಸೇರಿ ವಿವಿಧೆಡೆ ದೇವರಿಗೆ ಜಲಾಭಿಷೇಕ ನೆರವೇರಿಸಿ ಪ್ರಾರ್ಥಿಸಿದರು.
ಶರಣಗೌಡ ಹೊನ್ನಾಳ, ಶಿವರಾಜ ಪಾಳೆದ, ರಮೇಶ ಬೊಮ್ಮನಳ್ಳಿ, ಪ್ರಭು ಗಂಗಾಣಿ, ರಾಜಶೇಖರ ಬೊಮ್ಮನಳ್ಳಿ, ಸಂಗಣ್ಣಗೌಡ ಹೊನ್ನಾಳ, ಭೀಮರೆಡ್ಡಿ ಗಡೆಸೂರ, ಭೀಮು ಇವಣಿ, ಅನಿಲಕುಮಾರ ಬೊಮ್ಮನಳ್ಳಿ, ಶರಣು ಕಾಳನೂರ, ರವಿ ಗಂಗಾಣಿ, ದೇವಪ್ಪ ಗಂಗಾಣಿ, ಖಾಜಾ ರಾವೂರ, ಇಸ್ಮಾಯಿಲ್​ ತುಮಡಿ, ಶರೀಫ್​ ನೌಬತ್​, ವಿಜಯಕುಮಾರ ದೇಸಾಯಿ, ಸೂರ್ಯಕಾಂತ ಡೆಂಗಿ, ಉಮೇಶ ಡೆಂಗಿ, ಪ್ರಕಾಶ ಮುತ್ತಗಿ, ಮೊನಪ್ಪ ಭಂಕಲಗಿ, ಮಲ್ಲಪ್ಪ ಮುತ್ತಗಿ, ರುದ್ರಗೌಡ ಇಜಾರ, ಅಶೋಕ ಶಹಾಬಾದ್​, ಚಂದ್ರಶೇಖರ ಬೊಮ್ಮನಳ್ಳಿ, ಶರಣು ಬೊಮ್ಮನಳ್ಳಿ, ಅಹ್ಮದ್​ ರಾವೂರ, ಅಂಬಣ್ಣ ಇವಣಿ, ದಾವೂದ್​, ಇಸ್ಮಾಯಿಲ್​, ಬಸವರಾಜ ಡೆಂಗಿ, ಬಸವರಾಜ ಬೆಳಗುಂಪಿ, ಹಣಮಂತ ಕಣಮೇಶ್ವರ, ರಾಜು, ಚನ್ನು ತೆಂಗಳಿ, ಸಂತೋಷ ಡೆಂಗಿ, ಶಿವರಾಜ ಹರವಾಳ, ಚಂದ್ರ ಹಳಿಮನಿ, ಬಸವರಾಜ ಶಿರೂರ ಇತರರಿದ್ದರು.
ಯೇಸು ಸನ್ನಿಧಿಯಲ್ಲಿ ಪ್ರೇಯರ್​
ಭೀಮನಹಳ್ಳಿ ಗ್ರಾಮದ ಮೆಥೊಡಿಸ್ಟ್​ ಚರ್ಚ್​ನಲ್ಲಿ ಸಪ್ತ ಭಜನೆ ಹಮ್ಮಿಕೊಂಡಿದ್ದು, ನಿತ್ಯವೂ ಯೇಸು ನಾಮಸ್ಮರಣೆ ಮೂಲಕ ಮಳೆಯಾಗಲಿ ಎಂದು ಪ್ರಾರ್ಥನೆ ನಡೆಯುತ್ತಿದೆ. ರೈತರು ಸತತ 24 ಗಂಟೆ ನಿಂತುಕೊಂಡೆ ಭಜನೆಯಲ್ಲಿ ತಲ್ಲೀನರಾಗಿದ್ದಾರೆ. ಈ ಮೂಲಕ ಮಳೆಯಾಗಲಿ, ಉತ್ತಮ ಫಸಲು ಬರಲಿ ಎಂದು ಪ್ರೇಯರ್​ ಮಾಡಿದರು. ಬಾಬುರಾವ ಕರಿಚಕ್ರ, ಶರಣಪ್ಪ ಕರಿಚಕ್ರ, ಯೇಸಪ್ಪ ರಾಂಪುರಹಳ್ಳಿ, ಚಂದ್ರಪ್ಪ ಗಂಗಣ್ಣನೋರ, ಬಸವರಾಜ ಗಂಗಣ್ಣನೋರ, ದತ್ತು ಶಹಾಪುರ, ರಾಜಪ್ಪ ಅಪ್ಪಣ್ಣನೋರ, ಸುಧಾಕರ ಅಪ್ಪಣ್ಣನೋರ, ಸಿಮಿಯೋನಾ ಜೇನಿ, ಪರುತಪ್ಪ ಅಪ್ಪಣ್ಣನೋರ, ಸಾಮ್ಯುವೆಲ್​ ಗಂಗಣ್ಣನೋರ, ಅನಿಲ ಗಂಗಣ್ಣನೋರ, ಬಸವರಾಜ ಕಡಿಚಕದಾರು ಇತರರಿದ್ದರು.