ಗುಡಿಬಂಡೆ:
ಕೃಷಿಕರು ಇತ್ತೀಚೆಗೆ ದಾಳಿಂಬೆ ಬೆಳೆಯತ್ತ ಮುಖ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಬೆಲೆ ಕುಸಿದಿರುವುದು ಆತಂಕ ಹೆಚ್ಚಿಸಿದೆ.
ಹೆಚ್ಚು ಖರ್ಚು
ದಾಳಿಂಬೆ ಬೆಳೆ ಬೆಳೆಯುವುದು ಸುಲಭದ ಮಾತೇನಲ್ಲ. ಸಿಂಪಡಿಸುವ ಔಷಧ ಹೆಚ್ಚಿನ ಬೆಲೆಯದ್ದಾಗಿರುತ್ತದೆ. ನೀರು ಪೂರೈಕೆ, ಗೊಬ್ಬರ, ಕಳೆ ಕೀಳುವುದು, ಕಾಲಕ್ಕೆ ಅನುಗುಣವಾಗಿ ಔಷಧ ಸಿಂಪಡಣೆ ಇವೆಲ್ಲ ಆಗಬೇಕು. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕೀಟಗಳ ಹತೋಟಿಗೆ ಕ್ರಮ ವಹಿಸುವುದಲ್ಲದೆ, ಪಗಳ ಕಾಟ ತಪ್ಪಿಸಲು ಸಂಪೂರ್ಣ ತೋಟಕ್ಕೆ ಲಕ್ಷ ಲಕ್ಷ ಹಣ ವ್ಯಯ ಮಾಡಿ ನೆಟ್ ಅಳವಡಿಸಬೇಕು.
ಲಾಂತರ ರೂ. ಖರ್ಚು ಮಾಡಿ ಏಳೆಂಟು ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದೇನೆ, ಉತ್ತಮ ಇಳುವರಿ ಸಹ ಬಂದಿದೆ. ಈ ಬಾರಿ ದಾಳಿಂಬೆಗೆ ಉತ್ತಮ ಬೆಲೆ ಬರುತ್ತೆ, ಮಾಡಿರುವ ಸಾಲ ತೀರಿಸಬಹುದು ಎಂಬ ನಿರೀೆಯಲ್ಲಿದ್ದೆವು. ಆದರೆ, ಏಕಾಏಕಿ ಬೆಲೆ ಕುಸಿದಿದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಕನಿಷ್ಠ ಪಕ್ಷ ಸರ್ಕಾರವಾದರೂ ದಾಳಿಂಬೆ ಬೆಳೆಗಾರರಿಗೆ ಪರಿಹಾರ ನೀಡಬೇಕು.
— ಪ್ರಕಾಶ್, ಯುವ ರೈತ, ಚಿಕ್ಕನಾಗೇಲಿ.
ಬೆಲೆ ಕುಸಿತಕ್ಕೆ ಕಾರಣ
ಇತ್ತೀಚೆಗೆ ಹೆಚ್ಚುಮಂದಿ ದಾಳಿಂಬೆ ಬೆಳೆಯನ್ನು ಬೆಳೆಯುತ್ತಿರುವುದು
ಮಾರುಕಟ್ಟೆಗೆ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಸರಬರಾಜು ಆಗುತ್ತಿರುವುದು.
ಉತ್ತಮ ಇಳುವರಿ ಬಂದಿರುವುದು ಸೇರಿ ನಾನಾ ಕಾರಣಗಳಿವೆ.
ತಾಲೂಕಿನಲ್ಲಿ ಸುಮಾರು 395 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಇತ್ತೀಚೆಗೆ ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕುಗಳಲ್ಲಿ ಜಮೀನುಗಳನ್ನು ಬೇರೆ ಬೇರೆ ಜಿಲ್ಲೆಗಳವರು ಲೀಸ್ಗೆ ಹಾಕಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಹೆಚ್ಚಾಗಿರುವುದರಿಂದ ಬೆಲೆ ಕುಸಿದಿರಬಹುದು.
— ಎ.ಗಾಯತ್ರಿ, ಪ್ರಭಾರಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಗುಡಿಬಂಡೆ.