Pollution from the movement of crusher trucks
ಬಿಡದಿ: ಕ್ರಷರ್ ಲಾರಿಗಳ ಓಡಾಟದಿಂದ ಗ್ರಾಮದಲ್ಲಿ ಶಬ್ದ ಮಾಲಿನ್ಯ ಮತ್ತು ಮನೆಗಳಿಗೆ ಧೂಳು ಹೆಚ್ಚಾಗಿದೆ ಎಂದು ಆರೋಪಿಸಿ ಹೆಗ್ಗಡಗೆರೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಕೂಗಳತೆ ದೂರದಲ್ಲಿನ ಉರಗಹಳ್ಳಿ ಗ್ರಾಮದಲ್ಲಿನ ಬಂಡೆಗಳಿಂದ ಪ್ರತಿದಿನ ನೂರಾರು ಟಿಪ್ಪರ್ ಲಾರಿಗಳು ಹೆಗ್ಗಡಗೆರೆ ವಾರ್ಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಓಡಾಟ ವಾಡುತ್ತಿವೆ. ಇದರಿಂದ ಪ್ರತಿದಿನ ರಸ್ತೆಯ ಇಕ್ಕೆಲಗಳ ಮನೆಗಳಿಗೆ ಧೂಳು ಹೆಚ್ಚಾಗಿದೆ. ಇನ್ನು ರಾತ್ರಿಯ ವೇಳೆಯಲ್ಲಿ ಭಾರಿ ವಾಹನಗಳ ಒಡಾಟದಿಂದ ಶಬ್ದ ವಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿದರು.
ವಾಲೀಕರ ಜತೆ ಸಭೆ: ಕ್ರಷರ್‌ಗಳಿಂದ ಬರುವ ಲಾರಿಗಳನ್ನು ತಡೆದು ಕಳೆದ ವಾರ, ಗ್ರಾಮದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಲಾರಿಗಳು ಬಾರದಂತೆ ಎಚ್ಚರಿಕೆ ನೀಡಿದ್ದರು. ಅಂದಿನಿಂದ ಲಾರಿಗಳು ಸಂಚಾರ ಇರಲಿಲ್ಲ. ಹಾಗಾಗಿ ಶುಕ್ರವಾರ ಗ್ರಾಮಸ್ಥರು, ಕ್ರಷರ್ ವಾಲೀಕರು ಹಾಗೂ ಲಾರಿ ವಾಲೀಕರ ಜತೆಗೆ ಗ್ರಾಮದ ದೇವಾಲಯದ ಬಳಿ ಸಭೆ ನಡೆಸಲಾಯಿತು. ಆದರೆ ಸಭೆಯಲ್ಲಿ ನಡೆದ ವಿಚಾರಗಳಲ್ಲಿ ಒಮ್ಮತ ಮೂಡದೆ ಸಭೆ ಅಂತ್ಯವಾಗಿತ್ತು.
ಹಲವು ಷರತ್ತುಗಳಿಗೆ ಪಟ್ಟು: ಗ್ರಾಮದಲ್ಲಿ ಲಾರಿಗಳು ಸಂಚಾರ ವಾಡಬೇಕಾದರೆ ಹಲವು ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಚರ್ಚೆಗಳು ನಡೆದವು. ಪ್ರತಿ ಲಾರಿ ಹೆಚ್ಚಿನ ಲೋಡ್ ಹಾಕಿಕೊಂಡು ಬಾರಬಾರದು, ಲೋಡ್ ಆದ ನಂತರ ನೀರು ಹಾಕಿಕೊಂಡು ಮೇಲೆ ಹೊದಿಕೆ ಕಟ್ಟಿಕೊಂಡು ಬರಬೇಕು,
ಗ್ರಾಮದಲ್ಲಿ ಅತೀ ವೇಗದ ಚಾಲನೆ ವಾಡದೆ ಹಾಗೂ ಅನಗತ್ಯವಾಗಿ ಶಬ್ಧ ವಾಡದಂತೆ ಸಂಚಾರ ವಾಡಲಿ ಹಾಗೂ ಪ್ರಮುಖವಾಗಿ ಬೆಳಗ್ಗೆಯಿಂದ ರಾತ್ರಿ 9ಗಂಟೆ ಒಳಗೆ ಲಾರಿಗಳು ಸಂಚಾರ ವಾಡಬೇಕೆಂದು ಗ್ರಾಮದ ಮಹಿಳೆಯರು ಸಭೆಯ ಮುಂದೆ ವಿಷಯಗಳನ್ನು ಇಟ್ಟಿದ್ದರು.
ಈ ವಿಚಾರವಾಗಿ ಸಭೆಯಲ್ಲಿ ಲಾರಿಗಳ ವಾಲೀಕರು ಕ್ರಷರ್ ವಾಲೀಕರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಲಾರಿಗಳ ಓಡಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿ ಸಭೆಯಿಂದ ಹೊರ ನಡೆದಿದ್ದರು.
ಶಾಲಾ ಮಕ್ಕಳಿಗೆ ತೊಂದರೆ :ಪ್ರತಿದಿನ ಹಲವು ಖಾಸಗಿ ಶಾಲೆಗಳ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ವಾಡುತ್ತವೆ. ಬೆಳಗ್ಗೆ 6 ಗಂಟೆಗೆ ಲಾರಿಗಳ ಸಂಚಾರ ಆರಂಭವಾಗುತ್ತವೆ. ಇದರಿಂದ ಗ್ರಾಮದ ಮಧ್ಯ ಭಾಗದಲ್ಲಿ ಶಾಲಾ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿದೆ.
ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಾಯಂದಿರು ತಮ್ಮ ಮಕ್ಕಳನ್ನ ದಾಟಿಸಲು ಸಮಯ ಕೊಡುವುದಿಲ್ಲ. ಇದೊಂದು ದೊಡ್ಡ ಸಮಸ್ಯೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಗ್ರಾಮದ ಮುಖಂಡರಾದ ಹರೀಶ್ ಪಾಟೀಲ್, ಹೇಮಂತ್ ಸೇರಿ ಹಲವರು ಉಪಸ್ಥಿತರಿದ್ದರು.