ಬೆಂಗಳೂರಿನಲ್ಲಿ ಕಾಂಗ್ರೆಸ್​ ಸಮಿತಿ ತಮಿಳುನಾಡು ಉಸ್ತುವಾರಿ ಸೂರಜ್​ ಹೆಗ್ಡೆ ಅವರನ್ನು ಕೃಷ್ಣಗಿರಿ ಪಶ್ಚಿಮ ಜಿಲ್ಲಾಧ್ಯ ಹರೀಶ್​ಬಾಬು, ನಗರ ಅಧ್ಯ ಸಿ.ತ್ಯಾಗರಾಜನ್​, ಹೊಸೂರು ವಿಧಾನಸಭಾ ೇತ್ರದ ಉಸ್ತುವಾರಿ ಮೈಜಾ ಅಕ್ಬರ್​ ಮತ್ತು ಕೆಲಮಂಗಲಂ ಬ್ಲಾಕ್​ ಅಧ್ಯ ಸುಂದರ್​ ಭೇಟಿಯಾದರು.  
ರಾಜ್ಯ

ತಮಿಳುನಾಡಿನಲ್ಲಿ ರಾಜಕೀಯ ಬೇಗುದಿ / HOSURU

ಹೊಸೂರು : ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಕಾಂಗ್ರೆಸ್​ ಬೆಂಬಲದೊಂದಿಗೆ ಅಧಿಕಾರಕ್ಕೇರಿದ್ದು, ಇದೀಗ ಕೈ ಪಡಸಾಲೆಯೊಳಗೆ ಅಧಿಕಾರದ ಜಟಾಪಟಿ ಶುರುವಾಗಿದೆ.
ಹೊಸೂರು ಮಹಾನಗರ ಕಾಂಗ್ರೆಸ್​ ಅಧ್ಯರಾಗಿ ತ್ಯಾಗರಾಜ ಮುಂದುವರಿದಿದ್ದು, ಅವರ ವಿರುದ್ಧ ಮೈನಾರಿಟಿ ಅಧ್ಯ ಸಾಧಿಕನ್​ ಎಂಬವರು ತಾನು ಹೊಸೂರು ಮಹಾನಗರ ಕಾಂಗ್ರೆಸ್​ ಅಧ್ಯನೆಂದು ಪತ್ರಿಕಾ ಪ್ರಕಟಣೆ ನೀಡಿರುವುದು ತೀವ್ರ ಸಂಚಲನ ಸೃಷ್ಟಿಸಿದೆ.
ಈ ನಡುವೆ ಕೃಷ್ಣಗಿರಿ ಪಶ್ಚಿಮ ಜಿಲ್ಲೆಯ ಕಾಂಗ್ರೆಸ್​ ಅಧ್ಯರಾಗಿ ಬಂದಿರುವ ಹರೀಶ್​ಬಾಬು ಈ ಬಗ್ಗೆ ವಿವರಣೆ ನೀಡಿದ್ದು, ಯಾವುದೇ ರೀತಿಯ ಸ್ಥಾನ ಬದಲಾವಣೆ ಇದುವರೆಗೂ ನಡೆದಿಲ್ಲ ಎಂದಿದ್ದಾರೆ. ಅದಾದ ಬಳಿಕ ಬೆಂಗಳೂರಿನಲ್ಲಿ ತಮಿಳುನಾಡು ಪದ ಉಸ್ತುವಾರಿ ಸೂರಜ್​ ಹೆಗ್ಡೆ ಅವರನ್ನು ಭೇಟಿ ಮಾಡಿದ ಹರೀಶ್​ ಬಾಬು, ನಗರ ಅಧ್ಯ ಸಿ.ತ್ಯಾಗರಾಜನ್​, ಹೊಸೂರು ವಿಧಾನಸಭಾ ೇತ್ರ ಉಸ್ತುವಾರಿ ಮೈಜ ಅಕ್ಬರ್​ ಮತ್ತು ಕೆಲಮಂಗಲ ಬ್ಲಾಕ್​ ಅಧ್ಯ ಸುಂದರ್​ ಸೇರಿ ಹಲವು ಕಾರ್ಯಕರ್ತರು ಈ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸ್ಪಂದಿಸಿರುವ ಸೂರಜ್​ ಹೆಗ್ಡೆ, ಮುಂಬರುವ ದಿನಗಳಲ್ಲಿ ಎಲ್ಲ ಸ್ಥಾನಗಳಿಗೆ ಚುನಾವಣೆ ಮೂಲಕ ಕಾರ್ಯಕರ್ತರ ಸಮ್ಮುಖದಲ್ಲಿ ಮುಖ್ಯಸ್ಥರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ನಗರ ಅಧ್ಯರಾಗಿ ಸಿ.ತ್ಯಾಗರಾಜನ್​ ಮುಂದುವರಿಕೆ : ಸೂರಜ್​ ಹೆಗ್ಡೆ ಭೇಟಿ ಸಮಯದಲ್ಲಿ ಅಖಿಲ ಭಾರತ ಕಾಂಗ್ರೆಸ್​ ಸಮಿತಿಯ ಸಂಟನೆ ಎಸ್​ಎಸ್​ಎ ಚುನಾವಣೆಗಳನ್ನು ನಡೆಸುವ ಬಗ್ಗೆ ಪ್ರಮುಖ ಚರ್ಚೆ ನಡೆಸಲಾಯಿತು. ಬ್ಲಾಕ್​ ಅಧ್ಯರು ಮತ್ತು ನಗರ ಅಧ್ಯರಿಗೆ ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಕೃಷ್ಣಗಿರಿ ಪಶ್ಚಿಮ ಜಿಲ್ಲಾಧ್ಯ ಹರೀಶ್​ಸೂರಜ್​, ಹೆಗ್ಡೆ ಅವರೊಂದಿಗೆ ಸಮಾಲೋಚಿಸಿದರು. ಶ್ರೀದಲ್ಲೆ ಚುನಾವಣೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಮುಂಬರುವ ಎಸ್​ಎಸ್​ಎ ಚುನಾವಣೆಗಳು ನಡೆಯುವವರೆಗೆ ಸಿ.ತ್ಯಾಗರಾಜನ್​ ಹಳೆಯ ವ್ಯವಸ್ಥೆಯಲ್ಲಿ ನಗರ ಅಧ್ಯರಾಗಿ ಮುಂದುವರಿಯುತ್ತಾರೆ. ಸೂರಜ್​ ಹೆಗ್ಡೆ ಅವರು ಯಾವುದೇ ಹುದ್ದೆಯಲ್ಲಿ ಹೊಸಬರನ್ನು ಅಧಿಕೃತವಾಗಿ ೂಷಿಸಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಯಿತು.