ಘಟ್ಟಿರಡ್ಡಿಹಾಳದಲ್ಲಿ ಹಮ್ಮಿಕೊಂಡ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ತಾಪಂ ಮಾಜಿ ಸದಸ್ಯ ಶರಣಪ್ಪ ಗೌಡ ಪಾಟೀಲ ಚಾಲನೆ ನೀಡಿದರು. ಪ್ರಮುಖರಾದ ಶೇಖಮ್ಮ, ಯಂಕಮ್ಮ, ಪಾರವ್ವ, ಸುವರ್ಣ, ಫಕೀರಮ್ಮ, ಶರಣಯ್ಯ, ಹನುಮಂತ, ಶಂಕ್ರಪ್ಪ, ಗವಿಸಿದ್ದಪ್ಪ ಇತರರಿದ್ದರು.
ಅಳವಂಡಿ: ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ತಾಪಂ ಮಾಜಿ ಸದಸ್ಯ ಶರಣಪ್ಪಗೌಡ ಪಾಟೀಲ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮದ ಪ್ರತಿಯೊಬ್ಬ ಪೋಷಕರು ಜಾಗೃತರಾಗಿ 5 ವರ್ಷದೊಳಗಿನ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯರಾದ ಶೇಖಮ್ಮ, ಯಂಕಮ್ಮ, ಸಹಾಯಕಿಯರಾದ ಪಾರವ್ವ, ಸುವರ್ಣ, ಆಶಾ ಕಾರ್ಯಕರ್ತೆ ಫಕೀರಮ್ಮ, ಗ್ರಾಮದ ಪ್ರಮುಖರಾದ ಶರಣಯ್ಯ, ಹನುಮಂತ, ಶಂಕ್ರಪ್ಪ, ಗವಿಸಿದ್ದಪ್ಪ ಇದ್ದರು.