ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಗುರುವಾರ ನಡೆದ ವ್ಯಾಪಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮನೋಹರ ಅಗರವಾಲ್, ಶಿವರಾಜ ಇಂಗಿನಶೆಟ್ಟಿ, ಕೇದಾರ್ ರೂಜಿ, ರಾಜಶೇಖರ ಇದ್ದರು.
- ಸ್ವದೇಶಿ ವ್ಯಾಪಾರಿ ಮಂಚ್ ಸಹ ಸಂಯೋಜಕ ಅಗರವಾಲ್ ಹೇಳಿಕೆ
- ಕೆಕೆಸಿಸಿಐ ಸಭಾಂಗಣದಲ್ಲಿ ನಡೆದ ಸಂವಾದ
ಕಲಬುರಗಿ: ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಕಂಪನಿಗಳಿಂದ ದೇಶದ ಸಾಂಪ್ರದಾಯಿಕ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಸಣ್ಣ ವ್ಯಾಪಾರಿಗಳ ರಕ್ಷಣೆಗೆ ಸೂಕ್ತ ನೀತಿ ರೂಪಿಸುವ ಅಗತ್ಯವಿದೆ ಎಂದು ನವದೆಹಲಿಯ ಸ್ವದೇಶಿ ವ್ಯಾಪಾರಿ ಮಂಚ್ ರಾಷ್ಟ್ರೀಯ ಸಹ ಸಂಯೋಜಕ ಮನೋಹರ ಅಗರವಾಲ್ ಆತಂಕ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಸ್ವದೇಶಿ ಜಾಗರಣ ಮಂಚ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವ್ಯಾಪಾರಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಯ ಬೆನ್ನೆಲುಬಾಗಿರುವ ಸಣ್ಣ ವ್ಯಾಪಾರಿಗಳು ಇಂದಿನ ನೀತಿಗಳಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ. ವ್ಯಾಪಾರಿ ಕುಟುಂಬಗಳ ಮುಂದಿನ ಪೀಳಿಗೆ ಕುಟುಂಬದ ವ್ಯಾಪಾರ ಮುಂದುವರಿಸುವ ಬದಲು ಉದ್ಯೋಗಗಳತ್ತ ಮುಖ ಮಾಡುತ್ತಿರುವುದು ಚಿಂತಾಜನಕ ಬೆಳವಣಿಗೆ. ಪೋಷಕರು ತಮ್ಮ ಮಕ್ಕಳಿಗೆ ವ್ಯಾಪಾರದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿ, ಅವರನ್ನು ಆ ೇತ್ರಕ್ಕೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸ್ವದೇಶಿ ವ್ಯಾಪಾರಿ ಮಂಚ್ನೊಂದಿಗೆ ವಿವಿಧ ವ್ಯಾಪಾರ ಸಂಗಳು ಕೈಜೋಡಿಸುವಂತೆ ಆಹ್ವಾನಿಸಿದ ಅವರು, ಸ್ಥಳಿಯ ಮಟ್ಟದಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ನೀತಿ ಸಂಬಂಧಿತ ವಿಚಾರಗಳನ್ನು ಒಗ್ಗಟ್ಟಿನಿಂದ ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗಲಿದೆ ಎಂದರು.
ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂದ ಅಧ್ಯ ಸಂತೋಷ ಲಂಗರ್ ಮಾತನಾಡಿ, ಖಾನಾ ವಿದೇಶಿ, ಪಹೆನಾ ಸ್ವದೇಶಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆಹಾರ ಧಾನ್ಯ ಹಾಗೂ ಕೃಷಿ ಉತ್ಪನ್ನಗಳ ಆಮದು ಹೆಚ್ಚುತ್ತಿರುವುದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು, ಮಾರುಕಟ್ಟೆ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕೆಳಮಟ್ಟಕ್ಕೆ ಇಳಿಯುತ್ತಿವೆ. ಹೀಗಾಗಿ ಭಾರತದಲ್ಲೆ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳ ಆಮದು ನಿಯಂತ್ರಿಸುವ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಉಪಾಧ್ಯ ಕೇದಾರ ರೂಜಿ, ವ್ಯಾಪಾರ ಅದಾಲತ್ ಸಮಿತಿ ಅಧ್ಯ ರಾಜಶೇಖರ ದುಕಾಂದಾರ್, ಸಿಯುಕೆ ಪ್ರಾಧ್ಯಾಪಕ ಡಾ.ಬಸವರಾಜ ಎಂ.ಎಸ್, ದಾಲ್ ಮಿಲ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಕಾಂತ ಕೋಬಾಳ್, ಉಪಾಧ್ಯಕ್ಷ ವಿಷ್ಣುದಾಸ ತಪಾಡಿಯಾ, ಅಕ್ಕಿ ಮತ್ತು ಕಿರಾಣಿ ವ್ಯಾಪಾರಿಗಳ ಸಂದ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ, ಕಪನೂರು ಕೈಗಾರಿಕಾ ಸಂದ ಅಧ್ಯಕ್ಷ ರವೀಂದ್ರ ಮುಕ್ಕಾ, ಶಿವಕುಮಾರ ಬೆಳ್ಳಿ, ಆನಂದ ಚಿಂಚೂರಿ, ಬಸವರಾಜ ಸೋಮನಮರಡಿ, ರವಿಶಂಕರ ಜಮದರಖಾನಿ, ಅಭಿಜಿತ್ ಪಡಶೆಟ್ಟಿ, ರಾಹುಲ್ ತೆಂಗಳಿ, ಜಗದೀಶ ಪಾಟೀಲ್, ಸಂದೀಪ್ ಮಿಶ್ರಾ ಇತರರು ಪಾಲ್ಗೊಂಡಿದ್ದರು.
"
ಬದಲಾಗುವ ತಂತ್ರಾನ, ಗ್ರಾಹಕರ ಮನೋಭಾವ ಹಾಗೂ ಸರ್ಕಾರಿ ನೀತಿಗಳಿಗೆ ಅನುಗುಣವಾಗಿ ವ್ಯಾಪಾರಿಗಳೂ ಬದಲಾಗಬೇಕು. ಆಗ ಮಾತ್ರ ಈ ಕ್ಷೇತ್ರದಲ್ಲಿ ಉಳಿಯಲು ಮತ್ತು ಬೆಳೆಯಲು ಸಾಧ್ಯ.
— ಮನೋಹರ ಅಗರವಾಲ್, ರಾಷ್ಟ್ರೀಯ ಸಹ ಸಂಯೋಜಕ, ಸ್ವದೇಶಿ ವ್ಯಾಪಾರಿ ಮಂಚ್.