Raichur Utsava Logo 
ರಾಜ್ಯ

ರಾಯಚೂರು ಉತ್ಸವದಲ್ಲಿ ಮಾಧ್ಯಮಕ್ಕೆ ಪೊಲೀಸರ ಕಿರಿಕಿರಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭ
  • ಮಾಧ್ಯಮದವರಿಗೆ ಪ್ರತ್ಯೇಕ ಕೌಂಟರ್
  • ಫೋಟೋ, ವಿಡಿಯೋ ತೆಗೆದುಕೊಳ್ಳಲು ತೀವ್ರ ಸಮಸ್ಯೆ
ರಾಯಚೂರು: ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸುದ್ದಿಮಾಡಲು ತೆರಳಿದ್ದ ಪತ್ರಕರ್ತರಿಗೆ ಪೊಲೀಸರು ಒಳಗೆ ಬಿಡದೆ ಕಿರಿಕಿರಿ ಮಾಡಿದ ಪ್ರಸಂಗ ನಡೆಯಿತು.
ಮಾಧ್ಯಮದವರಿಗೆ ಪ್ರತ್ಯೇಕ ಕೌಂಟರ್ ಮಾಡಿದ್ದರೂ ಅಲ್ಲಿಂದ ವೇದಿಕೆ 50 ಫೀಟ್ ದೂರವಿದೆ. ಇದರಿಂದ ಫೋಟೋ, ವಿಡಿಯೋ ತೆಗೆದುಕೊಳ್ಳಲು ಪತ್ರಕರ್ತರು ತೀವ್ರ ಸಮಸ್ಯೆ ಎದುರಿಸಿದರು. ವಾರ್ತಾ ಇಲಾಖೆ ಸಿಬ್ಬಂದಿ, ಫೋಟೋ, ವಿಡಿಯೋ ಮಾಡಲು ಜಿಲ್ಲಾಡಳಿತ ಗುರುತಿಸಿದ ಖಾಸಗಿ ಕ್ಯಾಮರಾಮನ್‌ಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಜಿಲ್ಲಾಡಳಿತ ನೀಡಿದ ಮೀಡಿಯಾ ಪಾಸ್ ತೋರಿಸಿದರೂ ವೇದಿಕೆ ಮುಂಭಾಗಕ್ಕೆ ಪತ್ರಕರ್ತರನ್ನು ಬಿಡಲಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟನೆ ವೇಳೆ ಅತಿಯಾದ ಭದ್ರತೆ, ಪೊಲೀಸರ ದುಂಡಾವರ್ತನೆ ಪತ್ರಕರ್ತರಿಗೆ ತೀವ್ರ ಸಮಸ್ಯೆ ತಂದಿತು.
ಇದರಿಂದ ಫೋಟೋ, ವಿಡಿಯೋ ಮಾಡಲು ಪತ್ರಕರ್ತರು ಪರದಾಡಿದರೂ ಪೊಲೀಸರಿಗೆ ಕರುಣೆ ಬರಲಿಲ್ಲ. ವಾರ್ತಾ ಇಲಾಖೆ ಕಳಿಸುವ ಫೋಟೋಗಾಗಿ ಮಾಧ್ಯಮದವರು ತಡರಾತ್ರಿವರೆಗೆ ಕಾಯುವ ಸ್ಥಿತಿ ಬಂದಿತ್ತು. ಪೊಲೀಸರ ವರ್ತನೆಗೆ ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.