ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 390 ಕೆಜಿ ಗುಟ್ಖಾ ಮೂಟೆ ಹಾಗೂ 48 ಮದ್ಯದ ಪ್ಯಾಕೆಟ್​ಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದು.  
ರಾಜ್ಯ

ಕಾರಿನ ಬಾನೆಟ್​ ಮೇಲೆ ನೇತಾಡಿದ ಪೊಲೀಸ್​ ಕಾನ್​ಸ್ಟೇಬಲ್​! / HOSURU

ಹೊಸೂರು : ಹೊಸೂರು ಸಮೀಪದ ಜೂಜುವಾಡಿ ಪೊಲೀಸ್​ ಚೆಕ್​ ಪೋಸ್ಟ್​ ಬಳಿ ತಪಾಸಣೆಗೆಂದು ವೇಳೆ ಕಾರು ಅಡ್ಡಗಟ್ಟಿದ ಪೊಲೀಸ್​ ಪೇದೆಯನ್ನು ಗುದ್ದಿಕೊಂಡು ಕಾರಿನ ಬಾನೆಟ್​ ಮೇಲೆಯೇ ನಾಲ್ಕೆ$ದು ಕಿಮೀ ದೂರ ಹೊತ್ತೊಯ್ದ ಪ್ರಕರಣ ಸೋಮವಾರ ನಡೆದಿದೆ.
ಹೊಸೂರಿನ ನಿವಾಸಿ ಆರೋಪಿ ಯಾರಬ್​ ಬಾಷಾ(38) ಈ ಕೃತ್ಯ ಎಸಗಿದ್ದು, ಸಿಪ್ಕಾಟ್​ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್​ ಕಾನ್​ಸ್ಟೇಬಲ್​ ರಾಜೀವ್​ ಗಾಂಧಿ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 390 ಕೆಜಿ ಗುಟ್ಖಾಮೂಟೆಗಳು ಹಾಗೂ ಐಷಾರಾಮಿ ಕಾರು ಸೇರಿ 48 ಮದ್ಯದ ಪಾಕೆಟ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಾಣ ರಕ್ಷಣೆಗೆ ಅಂಗಲಾಚಿದ ಪೇದೆ: ಐಷಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಗುಟ್ಖಾ ಹಾಗೂ ಮದ್ಯದ ಪ್ಯಾಕೆಟ್​ ಸಾಗಿಸುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಚೆಕ್​ಪೋಸ್ಟ್​ನಲ್ಲಿ ಕಾರನ್ನು ತಡೆದು ತಪಾಸಣೆ ಮಾಡಲು ಮುಂದಾಗಲಾಗಿತ್ತು. ಈ ವೇಳೆ ಏಕಾಏಕಿ ಚಾಲಕ ಕಾರು ಚಾಲನೆ ಮಾಡಿದ್ದಾನೆ. ಆಯತಪ್ಪಿದ ಕಾನ್​ಸ್ಟೇಬಲ್​ ಕಾರಿನ ಬಾನೆಟ್​ ಮೇಲೆ ಬಿದ್ದಿದ್ದಾರೆ. ಆದರೂ ನಾಲ್ಕೆ$ದು ಕಿ.ಮೀ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರಿನ ವೈರ್​ ಹಿಡಿದುಕೊಂಡ ಪೇದೆ ಪ್ರಾಣರಕ್ಷಣೆಗೆ ಗೋಗರೆದಿದ್ದಾರೆ.
ಬೆನ್ನಟ್ಟಿದ ಪೊಲೀಸರು: ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಸಿಪ್ಕಾಟ್​ ಠಾಣೆ ಇನ್​ಸ್ಪೆಕ್ಟರ್​ ಸಯ್ಯದ್​ ಮುಬಾರಕ್​ ಹಾಗೂ ತಂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಹೊಸೂರಿನ ದರ್ಗಾ ಸಮೀಪ ಸಾರ್ವಜನಿಕರ ಸಹಾಯದಿಂದ ಕಾರನ್ನು ತಡೆದು ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಕ್ಯಾಮರಾದಲ್ಲಿ ದೃಶ್ಯ ಸೆರೆ: ಸಿನಿಮಾ ಶೈಲಿಯಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ನನ್ನು ಕಾರಿನ ಬಾನೆಟ್​ ಮೇಲೆ ಹೊತ್ತೊಯ್ದ ದೃಶ್ಯ ಬೇರೊಂದು ಕಾರಿನ ಡ್ಯಾಶ್​ಬೋರ್ಡ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಪ್ರಕರಣದಿಂದ ಕೆಲಕಾಲ ಸಿಪ್ಕಾಟ್​ನಿಂದ ಹೊಸೂರು ಮಾರ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.