ನವದೆಹಲಿ: ಕರ್ನಾಟಕದ ಬಿಜೆಪಿ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ(ಡಿ.10) ವಿಶೇಷ ಸಭೆ ನಡೆಸಿದ್ದಾರೆ.
ಸಂಸತ್ ಭವನದಲ್ಲಿ ರಾಜ್ಯದ ಸಂಸದರುಗಳೊಂದಿಗೆ ಚರ್ಚೆ ನಡೆದಿದೆ. ಎಲ್ಲಾ ಸಂಸದರ ವೈಯಕ್ತಿಕ ಹಾಗೂ ರಾಜಕೀಯ ವಿಚಾರವಾಗಿ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
40 ನಿಮಿಷಗಳ ಕಾಲ ಸಭೆ ನಡೆದಿರುವ ಮಾಹಿತಿ ಇದ್ದು, ಆಯಾ ಸಂಸದರ ಕ್ಷೇತ್ರದಲ್ಲಿ ಕಾರ್ಯಕರ್ತರು, ಮತದಾರರಿಗೆ ನಿಮ್ಮ ಕೊಡುಗೆ ಏನು ಎಂದು ಮೋದಿ ಪ್ರಶ್ನಿಸಿದ್ದಾರೆ. ಇನ್ನು ಸಭೆಯಲ್ಲಿ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರು ಭಾಗಿಯಾಗಿದ್ದಾರೆ.
ಉಡುಪಿಗೆ ಭೇಟಿ ನೀಡಿದ್ದ ಮೋದಿ
ನವೆಂಬರ್ 28ರಂದು ಮೋದಿ ಅವರು ಉಡುಪಿಯಲ್ಲಿ ರೋಡ್ ಶೋ ನಡೆಸಿ, ಶ್ರೀ ಕೃಷ್ಣ ಮಠದಲ್ಲಿ ಆರ್ಥಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಇದರಲ್ಲಿ ಕರ್ನಾಟಕ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಬಿವೈ ವಿಜಯೇಂದ್ರ, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಬೃಜೇಶ್ ಚೌಟಾ ಭಾಗವಹಿಸಿದ್ದರು. ಇದು ಸಾರ್ವಜನಿಕ ಸಭೆಯಾಗಿತ್ತು,(ಏಜೆನ್ಸೀಸ್).