ದೇಸಿ ಗೋವುಗಳ ರಕ್ಷಣೆಗೆ ಪಟ್ಟು cows 
ರಾಜ್ಯ

ದೇಸಿ ಗೋವುಗಳ ರಕ್ಷಣೆಗೆ ಪಟ್ಟು cows

ಕೋಲಾರ ಡೆಸ್ಕ್
ಮುಳಬಾಗಿಲು: ಗೋ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ನಗರದ ತಾಲೂಕು ಕಚೇರಿ ಮುಂದೆ ಗೋ ಸಮ್ಮಾನ್​ ಅಭಿಯಾನ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.cows
ಗೋ ಸಮ್ಮಾನ್​ ಅಭಿಯಾನ ತಾಲೂಕು ಮುಖ್ಯಸ್ಥ ಪಿ.ಎಂ. ರಘುನಾಥ್​ ಮಾತನಾಡಿ, ಭಾರತೀಯ ಸಂಸತಿ, ಪರಂಪರೆ, ಆರ್ಥಿಕತೆ, ಮಾನಸಿಕ ಆರೋಗ್ಯ, ವಿಷಮುಕ್ತ ಕೃಷಿ ಮತ್ತು ಪರಿಸರ ಸಮತೋಲನದಲ್ಲಿ ದೇಸಿ ಹಸುವಿನ ಸ್ಥಾನ ಅತ್ಯಂತ ಮಹತ್ವದ್ದು. ಹಾಗಾಗಿ ದೇಸಿ ಗೋವುಗಳನ್ನು ಕಟುಕರಿಂದ ರಕ್ಷಣೆ ಮಾಡುವ ಕೆಲಸವಾಗಬೇಕು. ಸರ್ಕಾರ ಮತ್ತು ಜಿಲ್ಲಾ, ತಾಲೂಕು ಆಡಳಿತಗಳು ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರವ್ಯಾಪಿ ಗೋ-ರಕ್ಷಣೆ ಮತ್ತು ಗೋ-ವಂಶ ಸಂರಕ್ಷಣಾ ಅಭಿಯಾನದಡಿ ಜನಜಾಗೃತಿ ಅಭಿಯಾನಗಳನ್ನು ತಾಲೂಕಿನ ಎಲ್ಲ ಕಡೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಂಗಲಿ ಕೆ. ಸತೀಶ್​ ಕುಮಾರ್​ ಮಾತನಾಡಿ, ಹಸು ಭಾರತದ ಪರಂಪರೆಯ ಜೀವನಾಡಿಯಾಗಿದ್ದರೂ, ಈಗ ಹತ್ಯೆ ಮತ್ತು ಉತ್ಪಾದನೆ ಕುಂಠಿತದಿಂದ ಗೋ-ವಂಶ ನಶಿಸುತ್ತಿದೆ. ಭಾರತದ ಭೂಮಿಯಲ್ಲಿ ಎಲ್ಲ ಗೋ-ವಂಶಗಳು ಆರೋಗ್ಯ, ಸಂತೋಷ, ಗೌರವಯುತವಾಗಿ ಮತ್ತು ಸುರಕ್ಷಿತವಾಗಿರಲು ಸರ್ಕಾರದ ಮಟ್ಟದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಆಗಿಲ್ಲ. ಹಾಗಾಗಿ ಗೋ-ಸಮ್ಮಾನ್​ ಅಭಿಯಾನದಡಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ತಾಲೂಕು ಆಡಳಿತದ ಮೂಲಕ ತಲುಪಿಸಲು ಕೋರಲಾಗಿದೆ ಎಂದರು.