ಗುರುಮಠಕಲ್​ ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ನೂತನ ಲ್ಯಾಪ್​ಟಾಪ್​ನ್ನು ಶಾಸಕ ಶರಣಗೌಡ ಕಂದಕೂರ ವಿತರಿಸಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ಗ್ರೇಡ್​&2 ತಹಸೀಲ್ದಾರ್​ ನರಸಿಂಹ ಸ್ವಾಮಿ, ಬಸವರಾಜ ಸಜ್ಜನ್​ ಇತರರಿದ್ದರು. 
ರಾಜ್ಯ

ಗ್ರಾಮೀಣ ಜನರ ಸಮಸ್ಯೆಗೆ ಶ್ರೀ ಸ್ಪಂದಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಸೂಚನೆ
  • ಅಧಿಕಾರಿಗಳಿಗೆ ಲ್ಯಾಪ್​ಟಾಪ್​ ವಿತರಣೆ
ಗುರುಮಠಕಲ್​: ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಗ್ರಾಮೀಣ ಜನರ ಸಮಸ್ಯೆಗೆ ಶ್ರೀ ಸ್ಪಂದಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಲ್ಯಾಪ್​ಟಾಪ್​ ವಿತರಿಸಿ ಮಾತಾಡಿದ ಅವರು, ತಾಲೂಕಿನ ಆಡಳಿತ ವ್ಯವಸ್ಥೆಗೆ ಡಿಜಿಟಲ್​ ವೇಗ ನೀಡುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ನೂತನ ಲ್ಯಾಪ್​ಟಾಪ್​ ವಿತರಿಸಲಾಗುತ್ತಿದ್ದು, ಹೀಗಾಗಿ ಜನರ ಸಮಸ್ಯೆಗೆ ಆದಷ್ಟು ಬೇಗ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.
ತಂತ್ರಜ್ಞಾನ ಬಳಕೆಯ ಮೂಲಕ ಗ್ರಾಮ ಮಟ್ಟದಲ್ಲೇ ಸೇವೆಗಳನ್ನು ಪ್ರವಾಗಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಹೀಗಾಗಿ ಲ್ಯಾಪ್​ಟಾಪ್​ಗಳ ನೆರವಿನಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿ ವಿವಿಧ ಕಂದಾಯ ದಾಖಲೆಗಳ ವಿಲೇವಾರಿ ವೇಗವಾಗಿ ನಡೆಯಲಿದೆ. ಅಧಿಕಾರಿಗಳು ಕಚೇರಿಗಳ ಸುತ್ತಾಟವಿಲ್ಲದೆ ಸ್ಥಳದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು ಹೇಳಿದರು.
ಸಣ್ಣಪುಟ್ಟ ಕೆಲಸಗಳಿಗಾಗಿ ದಿನಗಟ್ಟಲೇ ಕಾಯಬೇಕಾಗುವ ಸಾರ್ವಜನಿಕರ ಸಮಸ್ಯೆಗಳನ್ನು ಈ ಆಧುನಿಕ ಉಪಕರಣಗಳು ಕಡಿಮೆ ಮಾಡಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಮಟ್ಟದಲ್ಲಿ ಡಿಜಿಟಲೀಕರಣ ಬಲಪಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ವೇಗ ಎರಡನ್ನೂ ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ಗ್ರೇಡ್​&2 ತಹಸೀಲ್ದಾರ್​ ನರಸಿಂಹ ಸ್ವಾಮಿ, ಬಸವರಾಜ ಸಜ್ಜನ್​, ಕಂದಾಯ ನಿರೀಕ್ಷಕರಾದ ದೊಡ್ಡ ಬಸವರಾಜ, ಭೀಮಶೇನ್​ ಪಾಟೀಲ್​ ಇತರರಿದ್ದರು.