Please relieve our suffering.
ಕೊರಟಗೆರೆ: ಸರ್ಕಾರ ನಮ್ಮ ಬದುಕಿಗೆ ಮರಣ ಶಾಸನ ಬರೆಯುವ ಕಾವೇರಿ ಆ್ಯಪ್ ಮಾಡುವ ಮೂಲಕ ನಮ್ಮನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಪತ್ರ ಬರಗಾರರ ಒಕ್ಕೂಟದ ತಾಲೂಕು ಅಧ್ಯಕ್ಷ ನಟರಾಜ್ ತಿಳಿಸಿದರು.
ಪಟ್ಟಣ ನೋಂದಣಿ ಕಚೇರಿಯ ಮುಂದೆ ಸೋಮವಾರ ಮೌನ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕೆ.ಮಂಜುನಾಥ್ ಮೂಲಕ ಸರ್ಕಾರಕ್ಕೆ ಕಾವೇರಿ ಆ್ಯಪ್ ಕೈ ಬಿಡಬೇಕು ಎಂದು ಮನವಿ ಸಲ್ಲಿಸಿ ಮಾತನಾಡಿದರು.
ಬಿಕಮ್ದಾರರಿಗೆ ಸರ್ಕಾರದಿಂದ ಯಾವುದೇ ಭದ್ರತೆಯಿಲ್ಲ. ಸರ್ಕಾರ ಸೂಚಿಸಿರುವಂತೆ ಪತ್ರಗಳ ನಿರ್ವಹಣೆಯನ್ನು ಮಾಡಿಕೊಂಡು ಬದುಕುತ್ತಿದ್ದೆವು. ಈಗ ಕಾವೇರಿ 3.0 ಮಾಡಿರುದರಿಂದ ಬಿಕಮ್ದಾರ ವಯೋವೃದ್ಧರಿಗೆ ಮತ್ತು ರೈತಾಪಿ ವರ್ಗಕ್ಕೆ ಒಂದು ಪತ್ರ ಪಡೆಯಲು ಸಂಕಷ್ಟ ಎದುರಾಗಲಿದೆ, ಒಟಿಪಿಯನ್ನು ಪಡೆದು ಪಡೆಯುವ ಪತ್ರ ಕಾನೂನಾತ್ಮಕವಾಗಿ ತೊಂದರೆಯನ್ನು ಸೃಷ್ಟಿಸಲಿದೆ, ನಮಗೆ ಗುರುತಿನ ಚೀಟಿಯನ್ನು ರಾಜ್ಯ ಸರ್ಕಾರ ನೀಡಿಲ್ಲ. ನೆರೆ ರಾಜ್ಯಗಳಲ್ಲಿ ಗುರುತಿನ ಪತ್ರ ನೀಡಿದ್ದಾರೆ, ಸರ್ಕಾರ ಪತ್ರ ಪಡೆಯಲು ನಮಗೂ ಲಾಗಿನ್ ನೀಡಿ ನಮ್ಮ ಸಂಕಷ್ಟವನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿದರು.
ಉಪಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಶಿವರಾಮಯ್ಯ, ಖಜಾಂಚಿ ಪ್ರಕಾಶ್ ಕುಮಾರ್, ನಿರ್ದೇಶಕ ಪಾರ್ಥಸಾರತಿ, ನರಸಿಂಹಮೂರ್ತಿ, ಪಹದ್ಲಾದ್, ಮಂಜುನಾಥ್, ಸತೀಶ್, ಅನಂತಕುಮಾರ್ ಮತ್ತಿತರರು ಇದ್ದರು.