ಬನ್ನೇರುಟ್ಟ ಸಮೀಪದ ಸಕಲವಾರ ಗ್ರಾಮದ ಮೃತೆ ಸಮೀಾ ರೆಡ್ಡಿ ನಿವಾಸಕ್ಕೆ ಸಂಸದ ಡಾ. ಸಿ.ಎನ್. ಮಂಜುನಾಥ್ ಭೇಟಿ ನೀಡಿದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೆಂ.ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಶೇಖರ ರೆಡ್ಡಿ, ಬಿಜೆಪಿ ಮುಖಂಡ ಲಕ್ಷಿ$್ಮಕಾಂತ್ ರೆಡ್ಡಿ, ಹರೀಶ್ ರೆಡ್ಡಿ ಇದ್ದರು.
ಆನೇಕಲ್ : ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ನಿರಾನೆ ದಾಳಿಯಿಂದ ಮೃತಪಟ್ಟ ಜಿಗಣಿ ಹೋಬಳಿಯ ಸಕಲವಾರದ ವೈದ್ಯೆ ಸಮೀಾ ರೆಡ್ಡಿ ಕುಟುಂಬಕ್ಕೆ ಸಂಸದ ಡಾ.ಸಿ.ಎನ್.ಮಂಜುನಾಥ್ ಸಾಂತ್ವನ ಹೇಳಿದರು.
ಡಾ.ಸಮೀಕ್ಷಾ ರೆಡ್ಡಿ ಪ್ರಾಣಿಗಳ ರಕ್ಷಣೆಗೆ ಬದುಕನ್ನೇ ಅರ್ಪಿಸಿದ ನಿಷ್ಠಾವಂತ ಪಶುವೈದ್ಯೆ. ಅವರ ಅಗಲಿಕೆ ಸಮಾಜಕ್ಕೂ, ವೈದ್ಯಕಿಯ ಕ್ಷೇತ್ರಕ್ಕೂ ನಷ್ಟವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ನ್ಯಾಯ ದೊರಕುವಂತೆ ಸರ್ಕಾರ ಶ್ರೀ ಕ್ರಮವಹಿಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಒತ್ತಾಯಿಸಿದರು.
ದೈತ್ಯ ಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು, ಒಬ್ಬರೇ ವೈದ್ಯರನ್ನು ಹಲವು ಕಡೆಗಳಲ್ಲಿ ರೋಸ್ಟರ್ ವ್ಯವಸ್ಥೆಯಡಿ ನಿಯೋಜಿಸುವುದು, ಪಶುವೈದ್ಯರಿಗೆ ಕೇವಲ 18 ಸಾವಿರ ರೂ. ಸಂಬಳ ನೀಡುತ್ತಿರುವುದು ವಿಷಾದನೀಯ ಎಂದರು.
ತಾವರೆಕೊಪ್ಪದಂತಹ ಪ್ರಮುಖ ಪ್ರಾಣಿ ಸಂಗ್ರಹಾಲಯದಲ್ಲಿ ಶಾಶ್ವತ ಪಶುವೈದ್ಯರ ಕೊರತೆ ಇರುವುದು ದುರದೃಷ್ಟಕರ. ರಾಜ್ಯದಲ್ಲಿ ಖಾಲಿ ಇರುವ ನೂರಾರು ಪಶುವೈದ್ಯರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.