ಕಲಬುರಗಿ ಐತಿಹಾಸಿಕ ಕೋಟೆ ಸಂರಣೆ ಮತ್ತು ಪುನಶ್ಚೇತನಕ್ಕಾಗಿ ರೂಪಿಸಲಾದ 20 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸಂಸದ ರಾಧಾಕೃಷ್ಣ ದೊಡ್ಡಮನಿ ಕೇಂದ್ರ ಸಂಸತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ದೆಹಲಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು.
- ಕೇಂದ್ರ ಸಚಿವರ ಶೇಖಾವತ್ಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಮನವಿ
ಕಲಬುರಗಿ: ಐತಿಹಾಸಿಕ ಕಲಬುರಗಿ ಕೋಟೆ ಸಂರಣೆ ಮತ್ತು ಪುನಶ್ಚೇತನಕ್ಕಾಗಿ 20 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಿದ್ದು, ತಣ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಒತ್ತಾಯಿಸಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ್ದು, ಅಮೃತ್ 2.0 ಅಡಿ ಈ ಯೋಜನೆ ಪ್ರಸ್ತಾಪಿಸಲಾಗಿದ್ದು, ಕೋಟೆ ಕಂದಕದ ಜಲಮೂಲ ಮರುಜೀವಗೊಳಿಸುವುದು, ಉದ್ಯಾನವನ ಅಭಿವೃದ್ಧಿ, ಭೂದೃಶ್ಯ ನಿರ್ಮಾಣ (ಲ್ಯಾಂಡ್ ಸ್ಕೇಪಿಂಗ್), ಸಸಿ ನೆಡುವುದು ಹಾಗೂ ವಿವಿಧ ಪರಿಸರ ಸುಧಾರಣಾ ಕಾಮಗಾರಿ ಒಳಗೊಂಡಿದೆ. ಸ್ಮಾರಕವನ್ನು ಸಂರಸುವುದರ ಜತೆಗೆ ಇದನ್ನು ಹಸಿರು ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶ ಎಂದು ವಿವರಿಸಿದ್ದಾರೆ.
ಈ ಪ್ರಸ್ತಾವನೆ ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಣಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಬಾಕಿಯಿದ್ದು, ಕೇಂದ್ರ ಸಂಸತಿ ಸಚಿವರು ಮಧ್ಯಪ್ರವೇಶಿಸಿ ಶ್ರೀ ಆಡಳಿತಾತ್ಮಕ ಮಂಜೂರಾತಿ ದೊರಕಿಸಿಕೊಡಲು ಎಎಸ್ಐ ಜತೆ ಸಮನ್ವಯ ಸಾಧಿಸಬೇಕು ಎಂದು ಮನವಿ ಮಾಡಿದರು.