ಮಾಲಿನ್ಯ ತಡೆಗೆ ಗಿಡ-&ಮರ ಬೆಳೆಸಿ pollution 
ರಾಜ್ಯ

ಮಾಲಿನ್ಯ ತಡೆಗೆ ಗಿಡ-&ಮರ ಬೆಳೆಸಿ pollution

ಚಿಕ್ಕಬಳ್ಳಾಪುರ ಡೆಸ್ಕ್
ಗೌರಿಬಿದನೂರು: ಪ್ರಸ್ತುತ ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಗಿಡ-&ಮರ ಬೆಳೆಸುವುದು ಅನಿವಾರ್ಯವಾಗಿದೆ ಎಂದು ನೇತಾಜಿ ಯುವಕ ಸಂಘದ ಅಧ್ಯಕ್ಷ ಎ.ಅಶೋಕ ಹೇಳಿದರು.pollution
ತಾಲೂಕಿನ ಹುದುಗೂರು ಕ್ಲಸ್ಟರ್​ ವ್ಯಾಪ್ತಿಯ ಕಾಟನಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನೇತಾಜಿ ಯುವಕ ಸಂಘದಿಂದ ಹಸಿರು ಪರಿಸರ ನಿಮಾರ್ಣಕ್ಕಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಸಿಗಳನ್ನು ನೆಡುವುದಷ್ಟೇ ನಮ್ಮ ಗುರಿಯಲ್ಲ. ನೆಟ್ಟ ಪ್ರತಿಯೊಂದು ಸಸಿಯನ್ನೂ ಪೋಷಿಸಿ, ಹೆಮ್ಮರವಾಗಿ ಬೆಳೆಯುವವರೆಗೂ ನಿರಂತರ ನಿಗಾ ವಹಿಸುವುದು ಎಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲೂ ಸಂಘಟನೆ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.
ಗಣ್ಯರಿಂದ ಶ್ಲಾಘನೆ: ಶಾಲೆ ಆವರಣದಲ್ಲಿ ಹಸಿರು ವಾತಾವರಣ ನಿಮಾರ್ಣಕ್ಕೆ ಮುನ್ನುಡಿ ಬರೆದ ನೇತಾಜಿ ಯುವಕ ಸಂಘದ ಸಾಮಾಜಿಕ ಕಳಕಳಿಗೆ ಹುದುಗೂರು ಕ್ಲಸ್ಟರ್​ನ ಸಂಪನ್ಮೂಲ ವ್ಯಕ್ತಿ ಸಿಆರ್​ಪಿ ಗಂಗರಾಜು ಅಭಿನಂದಿಸಿದರು. ಯುವಕರ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಶ್ಲಾಘಿಸಿದರು. ಪರಿಸರ ರಕ್ಷಣೆ ಜವಾಬ್ದಾರಿಯನ್ನು ಯುವ ಪೀಳಿಗೆಗೆ ನೆನಪಿಸಲು ಶಾಲೆ ಆವರಣದಲ್ಲಿ ನೆರಳು ಹಾಗೂ ಹಣ್ಣು ನೀಡುವ 100 ವಿವಿಧ ಸಸಿಗಳನ್ನು ನೆಡಲಾಯಿತು.