ಆಳಂದನ ಏಕಾಂತ ರಾಮಯ್ಯ ಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಸವೇಶ್ವರ ಜಯಂತಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಬಿ.ಆರ್.ಪಾಟೀಲ್ ಅವರನ್ನು ವೀರಶೈವ ಮಹಾಸಭೆಯಿಂದ ಸನ್ಮಾನಿಸಲಾಯಿತು. ಶರಣಬಸಪ್ಪ ಪಾಟೀಲ್, ಸೋಮನಾಥ ಮೂಲಗೆ, ಬಾಬಾ ಸಾಹೇಬ್ ಪಾಟೀಲ್, ಬಾಬುರಾವ ಮಡ್ಡೆ ಇತರರಿದ್ದರು.
- ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ
- ಆಳಂದನಲ್ಲಿ ಮಹಾಸಭೆಯಿಂದ ಸತ್ಕಾರ
ಆಳಂದ: ಈ ಬಾರಿ ಜಿಲ್ಲಾ ಮಟ್ಟದ ವಿಶ್ವಗುರು ಬಸವೇಶ್ವರ ಜಯಂತಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಜಿಲ್ಲಾಧ್ಯಕ್ಷರೂ ಆದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಶ್ರೀ ಏಕಾಂತರಾಮಯ್ಯ ಮಂದಿರದಲ್ಲಿ ತಾಲೂಕ ವೀರಶೈವ ಮಹಾಸಭಾ ಹಾಗೂ ವಿವಿಧ ಸಂಟನೆಗಳಿಂದ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಬಾರಿ ಜಯಂತ್ಯುತ್ಸವ ಸಮಿತಿ ಅಧ್ಯರನ್ನಾಗಿ ಅಫಜಲಪುರದ ಶಾಸಕ ಎಂ.ವೈ.ಪಾಟೀಲ್ ಅವರನ್ನು ನೇಮಕ ಮಾಡಲಾಗಿತ್ತು. ಈ ವರ್ಷ ಸಮಿತಿಗೆ ನನ್ನನ್ನು ಅಧ್ಯರನ್ನಾಗಿ ನೇಮಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನಿಂದ 100 ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕು ಎಂದು ಕೋರಿದರು.
ವೀರಶೈವ ಮಹಾಸಭಾ ತಾಲೂಕು ಅಧ್ಯ ಶರಣಬಸಪ್ಪ ಪಾಟೀಲ್, ಪ್ರಮುಖರಾದ ಸೋಮನಾಥ ಮೂಲಗೆ, ಬಾಬಾ ಸಾಹೇಬ ಪಾಟೀಲ್, ಬಾಬುರಾವ ಮಡ್ಡೆ, ಗುರುಶರಣಗೌಡ ಪಾಟೀಲ್, ಆನಂದರಾವ ಪಾಟೀಲ್, ಮಲ್ಲಪ್ಪ ಹತ್ತರಕಿ, ಬಸವರಾಜ ವಾಲಿ, ರೇವಣಸಿದ್ದಪ್ಪ ನಾಗೂರ, ಡಾ.ಅಭಿನಂದನ ಬೆಡಗೆ, ಶ್ರೀಶೈಲ ಖಜೂರಿ, ಕಿರಣ ಬಂಗರಗಿ, ಅಪ್ಪಸಾಹೇಬ ತೀರ್ಥ, ಗಣೇಶ ಪಾಟೀಲ್, ಸುಭಾಷ ಬಳ್ಳೂರ್ಗಿ ಇತರರಿದ್ದರು. ಸತೀಶ ಷಣ್ಮುಖ ಸ್ವಾಗತಿಸಿದರು. ಸಂಜಯ ಪಾಟೀಲ್ ನಿರೂಪಣೆ ಮಾಡಿದರು.