ಪ್ರಮುಖ ಮುಖ್ಯಾಂಶಗಳು
ಪೈಪ್‌ಲಾಯಿನ್ ಸ್ಥಳಾಂತರಿಸುವಂತೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ರಾಜ್ಯದ ಗೋಟೂರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವ್ಯಾಪ್ತಿಗೆ ಒಳಪಡುತ್ತಿರುವ ನೀರಾವರಿ ಪೈಪ್‌ಲೈನ್‌ಗಳನ್ನು ಬೇರೆ ಕಡೆ ಅಳವಡಿಸಿಕೊಡಬೇಕು ಎಂದು ಸಿದ್ಧ ವಸ್ತು ತಾಲ್ಲೂಕಿನ ಅಂಕಲಿ, ರೂಪಿನಾಳ, ಕೇರೂರ, ಕಾಡಾಪುರ ಗ್ರಾಮದ ರೈತರು ತಹಸೀಲ್ದಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೃಷ್ಣಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೃಷಿಗೆ ವಿದ್ಯುತ್ ಪಂಪಸೆಟ್‌ಗಳನ್ನು ಅಳವಡಿಸಿಕೊಂಡು ನಂದಿಯಿಂದ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಪರಿಹಾರ ಒದಗಿಸುವ ಸರ್ವೆ ಕಾರ್ಯ ಮಾಡುವ ಸಮಯದಲ್ಲಿ ನೆಲದಲ್ಲಿದ್ದ ಪೈಪ್‌ಲೈನ್‌ಗಳ ಮಾಹಿತಿ ಗಮನಕ್ಕೆ ಇರುವುದಿಲ್ಲ. ಈಗ ಕಾಮಗಾರಿ ಪ್ರಾರಂಭಗೊಂಡ ಪೈಪ್‌ಲೈನ್‌ಗಳು ರಸ್ತೆಯ ಕೆಳಗೆ ಸಿಲುಕಿ ಹಾಳಾಗುತ್ತಿವೆ. ಇದರಿಂದ ನೀರಾವರಿ ಸೌಲಭ್ಯದಿಂದ ವಂಚಿತರಾಗುವೆ. ಕೆಲವು ಪೈಪಲಾಯನಗಳ ಕಾಮಗಾರಿಯಲ್ಲಿ ಒಡೆದು ಹಾಕಲಾಗಿದೆ.
ಆದ್ದರಿಂದ ಪೈಪ್‌ಲೈನ್‌ಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ ನಮಗೆ ಶಾಶ್ವತವಾಗಿ ನೀರಾವರಿ ಕಲ್ಪಿಸಿಕೊಡಲು ಮನವಿ ಮೂಲಕ ಸೇರಿಸಿದರು.
ನಮ್ಮ ಮನವಿಗೆ ಸ್ಪಂದನೆ ಸಿಗದೇ ಇದ್ದರೇ ಅಮರಣಾಂತ ಉಪವಾಸ ಕೈಗೊಂಡು ಹೋರಾಟ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಸುರೇಶ ಪಾಟೀಲ,ವಿಕಾಸ ಪಾಟೀಲ, ಪರಶುರಾಮ ಕೊಠಿವಾಲೆ, ಬಾಳಸಾಹೇಬ ಲಂಗುಟಿ, ತಾನಾಜಿ ಸಾಳುಂಕೆ, ಶೇಖರ ರೆಹಮಾನೆ, ಸತ್ಯಪ್ಪ ಖೋತ ಇತರರು ಇದ್ದರು.