ಪಿಂಕ್ ಪವರ್ ಮ್ಯಾರಥಾನ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಡಾ. ಪ್ರಜ್ಞಾ ಚಿಗುರುಪತಿ, ಎಂಇಐಎಲ್ ನಿರ್ದೇಶಕಿ ಸುಧಾ ರೆಡ್ಡಿ , ಮಿಸ್ ವರ್ಲ್ಡ್ 2025 ರ ಓಪಲ್ ಸುಚತಾ ಚುವಾಂಗ್ಸ್ರಿ ಉಪಸ್ಥಿತರಿದ್ದರು.
ಬೆಂಗಳೂರು: ದೇಶದ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮಾರಕ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸುಧಾ ರೆಡ್ಡಿ ಫೌಂಡೇಶನ್ ಹಾಗೂ ಎಂಇಐಎಲ್ ಫೌಂಡೇಶನ್ ಜಂಟಿಯಾಗಿ ಅಂತರರಾಷ್ಟ್ರೀಯ ಹಾಫ್ ಮ್ಯಾರಥಾನ್ ಆಯೋಜಿಸಿದೆ.
ಸೆ.27 ರಂದು ಹೈದರಾಬಾದ್‌ನ ನೆಕ್ಲೇಸ್ ರಸ್ತೆಯ ಪೀಪಲ್ಸ್ ಪ್ಲಾಜಾದಲ್ಲಿ ನಡೆಯಲಿರುವ ಪಿಂಕ್ ಪವರ್ ಮ್ಯಾರಥಾನ್‌ನಲ್ಲಿ 20,000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ 75 ಲಕ್ಷ ರೂ. ಗಳ ಬಹುಮಾನ ಮೀಸಲಿಡಲಾಗಿದ್ದು, ವಿಜೇತರಾದ 100 ಸ್ಪರ್ಧಿಗಳಿಗೆ ಹಂಚಲಾಗುವುದು ಎಂದು ಸುಧಾ ರೆಡ್ಡಿ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಎಂಇಐಎಲ್ ನಿರ್ದೇಶಕಿ ಸುಧಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಿಂಕ್ ಪವರ್ ರನ್ ಮ್ಯಾರಥಾನ್ ಸಮಾಜದಲ್ಲಿ ಉತ್ತಮ ಆರೋಗ್ಯವನ್ನು ಉತ್ತೇಜಿಸುವ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ವಿಮರ್ಶಾತ್ಮಕ ಜಾಗೃತಿ ಮೂಡಿಸುವ ಉದ್ದೇಶವಾಗಿದೆ.ಮೊದಲ ಬಾರಿಗೆ, ಈವೆಂಟ್ ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಮ್ಯಾರಥಾನ್ ಮತ್ತು ಡಿಸ್ಟೆನ್ಸ್ ರೇಸ್ (ಏಮ್ಸ್) ಪ್ರಮಾಣೀಕರಿಸಿದ ಅಧಿಕೃತ 21.097 ಕಿ.ಮೀ ಹಾಫ್ ಮ್ಯಾರಥಾನ್ ಅನ್ನು ಒಳಗೊಂಡಿರುತ್ತದೆ. ಹಾಫ್ ಮ್ಯಾರಥಾನ್ 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ವಿಭಾಗಗಳೊಂದಿಗೆ ಇರುತ್ತದೆ ಎಂದು ಹೇಳಿದರು.
ಮಿಸ್ ವರ್ಲ್ಡ್ 2025 ರ ಓಪಲ್ ಸುಚತಾ ಚುವಾಂಗ್ಸ್ರಿ ಮಾತನಾಡಿ ಸ್ತನ ಕ್ಯಾನ್ಸರ್ ಜಾಗೃತಿಯು ಆರೋಗ್ಯಕರ ಸಮುದಾಯವನ್ನು ನಿರ್ಮಿಸಲು ಪಿಂಕ್ ಪವರ್ ರನ್ ನಂತಹ ಮ್ಯಾರಥಾನ್ ಅವಶ್ಯಕವಾಗಿದೆ. ಹೀಗಾಗಿ ಮ್ಯಾರಥಾನ್‌ನಲ್ಲಿ ಭಾಗವಹಿಸುವುದು ಮತ್ತು ಬೆಂಬಲಿಸುವುದು ಓಟಗಾರರು ಮತ್ತು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿಯ ಶಾಶ್ವತ ಪ್ರಜ್ಞೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು,ಈ ಕಾರ್ಯಕ್ರಮಕ್ಕೆ ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿಎಲ್, ಎಐಜಿ ಮತ್ತು ಡೆಕಾಥ್ಲಾನ್ ಸೇರಿದಂತೆ ಕಾರ್ಪೊರೇಟ್ ಪಾಲುದಾರರು ಬೆಂಬಲ ನೀಡುತ್ತಿದ್ದು, ಐಫಿ-ನಿಶ್ ಮತ್ತು ಡಿಸ್ಟ್ರಿಕ್ಟೃ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದರು.