ಬಸವಕಲ್ಯಾಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮವನ್ನು ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಪವನಸಿಂಗ್ ಠಾಕೂರ್, ನಾಗೇಶ ಕುಲಕರ್ಣಿ, ದಿನೇಶ ಗೊಂಟಲ್, ವಿನೋದ ಜಾಧವ್, ನಿಸಾರ ಅಹ್ಮದ್, ರೂಪೇಶ ಗೊಂಟಲ್ ಇತರರಿದ್ದರು.
- ಶ್ರೀ ಡಾ.ರುದ್ರಮುನಿ ಶಿವಾಚಾರ್ಯ ಅಭಿಮತ
- ಬಸವಕಲ್ಯಾಣದಲ್ಲಿ ವಿಶ್ವ ಛಾಯಾಗ್ರಹಣ ದಿನ
ಬಸವಕಲ್ಯಾಣ: ಕ್ಯಾಮರಾದಲ್ಲಿ ಸೆರೆ ಹಿಡಿಯುವ ಒಂದು ಚಿತ್ರ ನೂರಾರು ಪದಗಳಿಗೆ ಸಮ. ನೆನಪು ಉಳಿಸಿ ಇತಿಹಾಸ ಪರಿಚಯಿಸುವ ಅದ್ಭುತ ಶಕ್ತಿ ಈ ಚಿತ್ರಗಳಿಗಿದೆ ಎಂದು ಗವಿಮಠ ಸಂಸ್ಥಾನದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಬಸವಕಲ್ಯಾಣ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ನಿಂದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಯಾಮರಾದಲ್ಲಿ ಸೆರೆಯಾದ ಚಿತ್ರಗಳಿಗೆ ಬೆಲೆ ಕಟ್ಟಲಾಗದು. ಫೋಟೋಗ್ರಾಫಿ ಜೀವನದ ಅಮೂಲ್ಯ ಕ್ಷಣ, ಭಾವನೆ, ಪ್ರಕೃತಿ ಮತ್ತು ಸೌಂದರ್ಯ ಸೆರೆಹಿಡಿವ ಜತೆಗೆ ಸಂಸತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಅದ್ಭುತ ಕಲೆಯಾಗಿದೆ ಎಂದರು.
ಜಿಲ್ಲಾಧ್ಯಕ್ಷ ಪವನಸಿಂಗ್ ಠಾಕೂರ್ ಮಾತನಾಡಿ, ಘೋಟೋಗ್ರಾಫರ್ಗಳಿಗೆ ಶಿಸ್ತು ಮತ್ತು ಕೌಶಲ ಮುಖ್ಯ. ಎಲ್ಲ ೋಟೋಗ್ರ್ಾರ್ಗಳಿಗೆ ಐಡಿ ಕಾರ್ಡ್ ಕಡ್ಡಾಯವಾಗಿದ್ದು, ಸದಸ್ಯತ್ವ ಪಡೆಯದವರು ಬೇಗ ಪಡೆಯಬೇಕು ಎಂದು ಕೋರಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರು ಸದಸ್ಯ ಗುರುನಾಥ ಗಡ್ಡೆ ಮಾತನಾಡಿದರು. ತಾಲೂಕು ಅಧ್ಯಕ್ಷ ನಾಗೇಶ ಕುಲಕರ್ಣಿ ಮಾತನಾಡಿದರು. ದಿನೇಶ ಗೊಂಟಲ್, ವಿನೋದ ಜಾಧವ್, ನಿಸಾರ್ ಅಹ್ಮದ್, ರೂಪೇಶ ಗೊಂಟಲ್, ಪ್ರದಿಪ ಭುರಳೆ, ಅಸ್ಲಂ ಖಾದಿವಾಲೆ, ಮಂಗೇಶ ಬೇಲೂರೆ, ಅಮರ ಬೆಂಬಳಗೆ, ಸಿರಾಜ್ ಬಡೂರೆ, ಶಿವರಾಜ ಮೇಕಾಲೆ, ರಾಮಲಿಂಗ ಪಾಟೀಲ್, ದತ್ತಾ ಗವಳಿ, ಶರಣು ಸ್ವಾಮಿ, ಶಿವಕುಮಾರ ಮುಳೆ, ಗುರುಲಿಂಗಯ್ಯ ಸ್ವಾಮಿ, ಕೈಲಾಸ, ಇಮ್ರಾನ್ ಪಟೇಲ್, ಅಂಜನ್ ಹುಲಸೂರು, ಚಂದ್ರಕಾಂತ ಚಿಡಗುಪ್ಪ, ಮಂಜುನಾಥ ಮೇತ್ರೆ ಇತರರಿದ್ದರು.
ಪ್ರದಿಪ ಭುರಳೆ ಪ್ರಾಸ್ತಾವಿಕ ಮಾತನಾಡಿದರು. ರಾಹುಲ್ ತುತಾರೆ ನಿರೂಪಣೆ ಜತೆ ಮಧುರ ಕಂಠದಲ್ಲಿ ಕನ್ನಡ ಚಿತ್ರಗಿತೆ ಹಾಡಿದರು. ವೀರಶೆಟ್ಟಿ ಪಾಟೀಲ್ ಫೋಟೋಗ್ರಾಫಿ ಕುರಿತು ಸ್ವರಚಿತ ಕವನ ವಾಚಿಸಿದರು.