Pharmaceutical waste in Huliyaru Lake!
ಹುಳಿಯಾರು : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಚರಂಡಿಯಲ್ಲಿ ಹಾಕುತ್ತಿದ್ದ ಔಷಧ ತ್ಯಾಜ್ಯಕ್ಕೆ ಮುಕ್ತಿ ಸಿಕ್ಕಿ ಬಳಿಕ ಈಗ ಹುಳಿಯಾರು ಕೆರೆಯಲ್ಲಿ ಔಷಧ ತ್ಯಾಜ್ಯ ಕಾಣಸಿಗುತ್ತಿದೆ.
ಆರೋಗ್ಯ ಕೇಂದ್ರದ ಎದುರಿನ ಚರಂಡಿಯಲ್ಲಿ ಬಳಕೆಯಾದ ಸಿರೆಂಜ್, ಬ್ಯಾಂಡೇಜ್, ಔಷಧ ಬಾಟಲ್, ವಾತ್ರೆಗಳು, ಅವಧಿ ಮುಗಿದಿರುವ ಔಷಧ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಎಸೆಯಲಾಗುತ್ತಿತ್ತು. ಈ ಬಗ್ಗೆ ವಿಜಯವಾಣಿ ದಿನಪತ್ರಿಕೆಯಲ್ಲಿ ‘ಹುಳಿಯಾರು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಔಷಧ ತ್ಯಾಜ್ಯ’ ಶಿರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ವರದಿ ಪರಿಣಾಮ ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಚಿಕ್ಕನಾಯಕನಹಳ್ಳಿ ಟಿಎಚ್‌ಒ ಡಾ.ಅಜಯ್, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಮೆಡಿಕಲ್ ಸ್ಟೋರ್ಸ್‌ನ ವಾಲೀಕ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಚರಂಡಿ ದಡದಲ್ಲಿ ಔಷಧ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಡುತ್ತಿರುವುದನ್ನು ಗಮನಿಸಿ ಕಡಿವಾಣ ಹಾಕಲು ಸಿಬ್ಬಂದಿಗೆ ಸೂಚಿಸಿದರು. ಅಂದಿನಿಂದ ಚರಂಡಿಯಲ್ಲಿ ತ್ಯಾಜ್ಯ ಎಸೆಯುವುದು ನಿಂತಿತ್ತು. ಆದರೆ ಈಗ ಹುಳಿಯಾರು ಕೆರೆಯಲ್ಲಿ ಔಷಧ ತ್ಯಾಜ್ಯ ಕಾಣಸಿಗುತ್ತಿದೆ. ಇಷ್ಟು ದಿನ ಕೆರೆಯಲ್ಲಿ ಕಾಣಸಿಗದ ಔಷಧ ತ್ಯಾಜ್ಯ ಈಗ ಕಾಣಸಿಗುತ್ತಿರುವುದರಿಮದ ಆಸ್ಪತ್ರೆ ಆವರಣದಲ್ಲಿ ಕಸ ಎಸೆಯುತ್ತಿದ್ದವರೇ ಈಗ ಕೆರೆ ಅಂಗಳದಲ್ಲಿ ಎಸೆಯುತ್ತಿದ್ದಾರೆಯೇ ಎನ್ನುವ ಅನುವಾನ ಮೂಡಿದೆ.
ಸರ್ಕಾರಿ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್, ಔಷಧ ಅಂಗಡಿ ಸೇರಿದಂತೆ ಯಾವುದೇ ಔಷಧೋಪಚಾರ ವಾಡುವ ಕೇಂದ್ರಗಳ ಅನಪಯುಕ್ತ ಔಷಧಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಅನುಪಯುಕ್ತ ಅಥವಾ ಅವಧಿ ಮುಗಿದಿರುವ ಔಷಧ (ಮೆಡಿಸಿನ್ ರಿಟರ್ನ್ ಪ್ರೋಗ್ರಾಮ್‌ಎಂಆರ್‌ಪಿ) ಔಷಧ ತಯಾರಿಸಿದ ಕಂಪನಿಗಳಿಗೆ ಹಿಂತಿರುಗಿಸಬೇಕು. ಆಸ್ಪತ್ರೆಗಳಲ್ಲಿ ಬಳಸಲಾಗುವ ವೈದ್ಯಕೀಯ ತ್ಯಾಜ್ಯಗಳನ್ನು ಕಸ ವಿಲೇವಾರಿ ಗಾಡಿಗಳಿಗೆ ಹಾಕದೇ, ವೈದ್ಯಕೀಯ ತ್ಯಾಜ್ಯ ವಿಲೇವಾರಿ ಟಕದ ಸಂಗ್ರಹಗಾರರಿಗೇ ನೀಡಬೇಕು ಎನ್ನುವ ನಿಯಮವಿದ್ದರೂ ಸಹ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ ಪರಿಣಾಮ ತ್ಯಾಜ್ಯ ಈಗ ಕೆರೆ ಸೇರುವಂತಾಗಿದೆ. ಇಂತಹ ಔಷಧಗಳನ್ನು ದನ-ಕರುಗಳು, ಪ್ರಾಣಿ-ಪಕ್ಷಿಗಳು, ಜಲಚರಗಳು ಸೇವಿಸಿದರೆ ಅಪಾಯವಿರುತ್ತದೆ ಎನ್ನುತ್ತಾರೆ ತಜ್ಞರು.
ಅನುಪಯುಕ್ತ ಔಷಧಗಳನ್ನು ನಿಯವಾವಳಿ ಪ್ರಕಾರ ವಿಲೇವಾರಿ ವಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಗರದ ಹಾಗೂ ಸುತ್ತಲಿನ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಔಷಧ ಅಂಗಡಿಯವರಲ್ಲಿ ಜಾಗೃತಿ ಮೂಡಿಸಬೇಕಿದೆ. ಈಗ ಕೆರೆಯಲ್ಲಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಕ್ರಮ ಕೈಗೊಂಡರೆ ವಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ. ಇನ್ನಾದರೂ ಆರೋಗ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದೋ ಕಾದು ನೋಡಬೇಕಿದೆ.