- ಉಚಿತ ಸಮವಸ, ಪಠ್ಯಪುಸ್ತಕದ, ಅಭ್ಯಾಸ ಪುಸ್ತಕದ ಜತೆಗೆ ನೋಟ್ ಪುಸ್ತಕವನ್ನು ಸಹ ವಿತರಿಸಬೇಕು ಎಂಬ ಉದ್ದೇಶಿಸಿದ್ದ ಯೋಜನೆಗೆ ಬ್ರೇಕ್
- ಆರ್ಥಿಕ ಇಲಾಖೆಯು ಪ್ರಸ್ತಾವನೆಗೆ ಅನುದಾನ ನೀಡಲು ನಿರಾಕರಿಸಿರುವುದರಿಂದ ಯೋಜನೆಯು ಆರಂಭವಾಗುವುದು ಅನುಮಾನ
- ಒಂದರಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಮುಂಬರುವ ವರ್ಷದಿಂದ ನೋಟ್ ಬುಕ್ ವಿತರಿಸಲು ಉದ್ದೇಶಿಸಿದ್ದ ಸರ್ಕಾರ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಲಿರುವ ಒಂದರಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಮುಂಬರುವ ವರ್ಷದಿಂದ ನೋಟ್ ಬುಕ್ ವಿತರಿಸಲು ಉದ್ದೇಶಿಸಿದ್ದ ಸರ್ಕಾರದ ಯೋಜನೆಗೆ ಆರ್ಥಿಕ ಇಲಾಖೆಯು ಅನುಮತಿ ನೀಡಲು ನಿರಾಕರಿಸಿದೆ.
ಉಚಿತ ಸಮವಸ, ಪಠ್ಯಪುಸ್ತಕದ, ಅಭ್ಯಾಸ ಪುಸ್ತಕದ ಜತೆಗೆ ನೋಟ್ ಪುಸ್ತಕವನ್ನು ಸಹ ವಿತರಿಸಬೇಕು ಎಂಬ ಉದ್ದೇಶಿಸಿದ್ದ ಯೋಜನೆಗೆ ಬ್ರೇಕ್ ಬಿದ್ದಿದೆ.
ಯೋಜನೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಮತ್ತು ಸಚಿವ ಮಧು ಬಂಗಾರಪ್ಪ ೋಷಿಸಿದ್ದರು. ಆದರೆ, ಆರ್ಥಿಕ ಇಲಾಖೆಯು ಪ್ರಸ್ತಾವನೆಗೆ ಅನುದಾನ ನೀಡಲು ನಿರಾಕರಿಸಿರುವುದರಿಂದ ಯೋಜನೆಯು ಆರಂಭವಾಗುವುದು ಅನುಮಾನ ಎನ್ನಲಾಗಿದೆ.