ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶನಾಲಯ
- ಒಟ್ಟಾರೆ 6,687 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಕೋರಿ ಹಾಗೂ ಅವರ ಗೌರವಧನಕ್ಕಾಗಿ 93.61 ಕೋಟಿ ರೂ. ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಿತ್ತು.
- ಆದರೆ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಳೆದ ಬಾರಿಯಷ್ಟೇ ಸಂಖ್ಯೆಯ ಅತಿಥಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಲು 85.20 ಕೋಟಿ ರೂ. ಅನುದಾನ
- 85.20 ಕೋಟಿ ರೂ. ಅನುದಾನ ಒದಗಿಸಿರುವುದರಿಂದ 6,086 ಅತಿಥಿ ಉಪನ್ಯಾಸಕರನ್ನು ಮಾತ್ರ 10 ತಿಂಗಳ ಅವಧಿಗೆ ಈ ಬಾರಿಯೂ ನೇಮಕ
ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ 6,086 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅನುಮತಿ ನೀಡಿ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶನಾಲಯವು ಈ ಬಾರಿ ಈ ಬಾರಿ 100 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಗಣಕ ವಿಜ್ಞಾನ ವಿಷಯ ಆರಂಭಿಸಲು ಅನುಮತಿ ನೀಡಿರುವುದು, 60 ಸರ್ಕಾರಿ ಪಿಯು ಕಾಲೇಜುಗಳನ್ನು ಆದರ್ಶ ಕಾಲೇಜುಗಳಾಗಿ ಉನ್ನತೀಕರಿಸಿರುವುದು, ಬಡ್ತಿ ಹಾಗೂ ವಯೋನಿವೃತ್ತಿ ಹಿನ್ನೆಲೆಯಲ್ಲಿ ಖಾಲಿಯಾಗುವ ಉಪನ್ಯಾಸಕ ಹುದ್ದೆಗಳಿಗೆ ಪ್ರತಿಯಾಗಿ ಒಟ್ಟಾರೆ 6,687 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಕೋರಿ ಹಾಗೂ ಅವರ ಗೌರವಧನಕ್ಕಾಗಿ 93.61 ಕೋಟಿ ರೂ. ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಳೆದ ಬಾರಿಯಷ್ಟೇ ಸಂಖ್ಯೆಯ ಅತಿಥಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಲು 85.20 ಕೋಟಿ ರೂ. ಅನುದಾನ ಒದಗಿಸಿರುವುದರಿಂದ 6,086 ಅತಿಥಿ ಉಪನ್ಯಾಸಕರನ್ನು ಮಾತ್ರ 10 ತಿಂಗಳ ಅವಧಿಗೆ ಈ ಬಾರಿಯೂ ನೇಮಕ ಮಾಡಿಕೊಳ್ಳಲು ಆದೇಶಿಸಿದೆ. ಮಾಸಿಕ ಅವರಿಗೆ 14 ಸಾವಿರ ರೂ. ಗೌರವಧನ ನೀಡಲು ಸೂಚಿಸಿದೆ.