ಮುದೇನೂರು ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಹಗರಿ ನದಿಗೆ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಬಾಗಿನ ಅರ್ಪಿಸಿದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೀರನಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸವ ಇತರರಿದ್ದರು. 
ರಾಜ್ಯ

ಕಾಲುವೆಯಿಂದ ಶಾಶ್ವತ ನೀರಾವರಿ

JAGADEESH KUMBAR
ಸಿರಗುಪ್ಪ: ಹಿರೇಹಾಳ, ಕೆ.ಸೂಗೂರು ಗ್ರಾಮ ವ್ಯಾಪ್ತಿಯಲ್ಲಿ ಕಾಲುವೆ ನಿರ್ಮಿಸಿದಲ್ಲಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅಭಿಪ್ರಾಯಪಟ್ಟರು.
ಉತ್ತಮ ಮಳೆಯಿಂದ ಹಗರಿ ನದಿಗೆ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಮುದೇನೂರು ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಬುಧವಾರ ಬಾಗಿನ ಅರ್ಪಿಸಿ ಮಾತನಾಡಿದರು. 
ಹಗರಿ ನದಿ ಅಭಿವೃದ್ಧಿಗಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 17 ಕೋಟಿ ರೂ. ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ 17.5 ಕೋಟಿ ರೂ. ಸೇರಿದಂತೆ 60 ಕೋಟಿ ರೂ. ಬಿಡುಗಡೆ ಮಾಡಿದ್ದರು. 
ಇನ್ನೂ ಮೂರು ಅಡಿ ಬ್ಯಾರೇಜ್ ಎತ್ತರ ಹೆಚ್ಚಿಸಿದರೆ ಸುಮಾರು ಮೂರು ಟಿಎಂಸಿ ನೀರು ಸಂಗ್ರಹಿಸಲು ಸಾಧ್ಯವಾಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಅನುಕೂಲವಾಗಲಿದೆ ಎಂದರು.  
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೀರನಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸವ, ಪ್ರಮುಖರಾದ ಮೋಹನರೆಡ್ಡಿ, ಕೋರಿ ಪಿಡ್ಡಯ್ಯ, ಶಿವಪ್ಪ, ಕಬ್ಬೇರು ಕಾಳಪ್ಪ, ಹನುಮಂತಪ್ಪ, ಶಿವಪ್ಪ, ಮಲ್ಲಯ್ಯ, ಮಾರೇಶ ಇದ್ದರು.