ಕಾಳಗಿಯಲ್ಲಿನ ಮಹಾಲಕ್ಷಿ$್ಮ ಗ್ಯಾಸ್​ ಏಜೆನ್ಸಿ ಎದುರು ಸಿಲಿಂಡರ್​ಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಜನರು. 
ರಾಜ್ಯ

ಗ್ಯಾಸ್​ ಟ್ರಬಲ್​ಗೆ ಜನರ ಪರದಾಟ

ಪ್ರಮುಖ ಮುಖ್ಯಾಂಶಗಳು

  • ಕಾಳಗಿಯಲ್ಲಿ ಒಂದೂವರೆ ತಿಂಗಳಾದರೂ ಸಿಗದ ಸಿಲಿಂಡರ್
  • ಇಂಡೇನ್​ಗಿಲ್ಲ ತೊಂದ್ರೆ, ಎಚ್​ಪಿ ಸರಬರಾಜು ಆಗ್ತಿಲ್ಲ
ಕಾಳಗಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಅಡುಗೆ ಅನಿಲ ಸಮಸ್ಯೆ ಮಿತಿಮೀರಿದ್ದು, ಒಂದೂವರೆ ತಿಂಗಳಾದರೂ ಸಿಲಿಂಡರ್​ ಸಿಗದೆ ಜನರು ಪರದಾಡುತ್ತಿದ್ದಾರೆ.
ಪಟ್ಟಣದಲ್ಲಿ ಇಂಡೇನ್​, ಎಚ್​ಪಿ ಎರಡು ಗ್ಯಾಸ್​ ಏಜೆನ್ಸಿಗಳಿದ್ದು, ಇಂಡೇನ್​ ಯಾವುದೇ ಸಮಸ್ಯೆ ಇಲ್ಲದೆ ಜನರಿಗೆ ಸಿಲಿಂಡರ್​ ತಲುಪಿಸುತ್ತಿದೆ. ಆದರೆ ಎಚ್​ಪಿ ಗ್ರಾಹಕರು ಪಟ್ಟಣದಲ್ಲಿ ಹೆಚ್ಚಿದ್ದು, ಇವರಿಗೆ ಸಿಲಿಂಡರ್​ ಸಿಗದೆ ಸಮಸ್ಯೆ ಸೃಷ್ಟಿಯಾಗಿದೆ. ಬುಕ್​ ಮಾಡಿ ತಿಂಗಳು ಮುಗಿದರೂ ಮನೆಗೆ ಗ್ಯಾಸ್​ ಬಾರದೆ ಪರದಾಡುವಂತಾಗಿದೆ.
ಮನೆಗೆ ಬಾರದಿರುವು ಕಳೆದು 3&4 ದಿನಗಳಿಂದ ಜನರೇ ಏಜೆನ್ಸಿ ಎದುರು ಖಾಲಿ ಸಿಲಿಂಡರ್​ನೊಂದಿಗೆ ಸರದಿ ಸಾಲಿನಲ್ಲಿ ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲನ್ನು ಲೆಕ್ಕಿಸದೆ ಸಾಲಿನಲ್ಲಿ ನಿಂತು ಸಿಲಿಂಡರ್​ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಎಚ್​ಪಿ ಕಂಪನಿಯ ಅಧಿಕೃತ ವಿತರಕರಾದ ಮಹಾಲಕ್ಷಿ$್ಮ ಗ್ಯಾಸ್​ ಏಜೆನ್ಸಿ ಗ್ರಾಹಕರ ಪಾಸ್​ಬುಕ್​ ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಬಂದಾಗಲೆಲ್ಲ ಏನಾದರೊಂದು ನೆಪ ಹೇಳಿ ವಾಪಸ್​ ಕಳಿಸುತ್ತಿದ್ದಾರೆ.
ಕಾಳಸಂತೆ ಸರಳವಾಗಿ ಸಿಲಿಂಡರ್​ ಲಭಿಸುತ್ತಿದ್ದಿ, ಮನೆಗಳಿಗೆ ವಿತರಣೆ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ. ಏಜೆನ್ಸಿ ಅವರನ್ನು ಕೇಳಿದರೆ ಒಟಿಪಿ ಹೇಳಿ, ಇಕೆವೈಸಿ ಮಾಡಿಸಿ, ಫೋನ್​ ಬದಲಾಯಿಸಿ, ಕಸ್ಟಮರ್​ ಕಾಲ್​ ಸೆಂಟರ್​ಗೆ ಕರೆ ಮಾಡಿ ಎಂದು ಹೇಳಿಕೊಂಡು ದಿನದೂಡುತ್ತಿದ್ದಾರೆ ಎಂದು ಸ್ಥಳಿಯರು ದೂರುತ್ತಿದ್ದಾರೆ.