ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಪಂಅನ್ನು ಪಪಂಆಗಿ ಮೇಲ್ದರ್ಜೆಗೇರಿದ ಸಂದರ್ಭದಲ್ಲಿ ತ್ಯಾಮಗೊಂಡ್ಲು ಗ್ರಾಮಸ್ಥರು ಶಾಸಕರ ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು. ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಪ್ರಕಾಶ್ ಬಾಬು, ಗ್ರಾಪಂ ಅಧ್ಯಕ್ಷೆ ಉಮಾಹರೀಶ್ ಇತರರು ಇದ್ದರು.
ತ್ಯಾಮಗೊಂಡ್ಲು : ಶಾಸಕರಾಗಿ ಜನರ ಕೆಲಸ ಮಾಡುವುದು ಸಾಮಾನ್ಯ ಪ್ರಕ್ರಿಯೆ. ಅದಕ್ಕೆ ಸನ್ಮಾನ ಮಾಡಿಸಿಕೊಳ್ಳುವುದು ಸಲ್ಲ. ಆದರೆ, ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ನೆಲಮಂಗಲ ತಾಲೂಕಿನ ದೊಡ್ಡಬೆಲೆ ರಸ್ತೆಯಲ್ಲಿರುವ ಖಾಸಗಿ ಸ್ಥಳದಲ್ಲಿ ತ್ಯಾಮಗೊಂಡ್ಲು ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜಕಾರಣ ಮಾಡಬೇಕು, ಆದರೆ ಎಲ್ಲದರಲ್ಲೂ ಅದನ್ನು ಬೆರೆಸಬಾರದು. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತನ್ನು ಎರಡೂವರೆ ವರ್ಷದಲ್ಲೇ ಪೂರ್ಣಗೊಳಿಸಿದ್ದೇನೆ. ಬೇಗೂರು ನಿಡವಂದ ರಸ್ತೆ ಮುಕ್ತಾಯ ಹಂತದಲ್ಲಿದೆ. ಅಲ್ಲದೇ ತ್ಯಾಮಗೊಂಡ್ಲು ಗ್ರಾಪಂಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಆದೇಶವಾಗಿದೆ. ಅದು ನನಗೆ ತೃಪ್ತಿ ತಂದಿಲ್ಲ. ತ್ಯಾಮಗೊಂಡ್ಲುವನ್ನು ಪುರಸಭೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ತ್ಯಾಮಗೊಂಡ್ಲು ಹೋಬಳಿಯನ್ನು ಮಾದರಿ ಹೋಬಳಿಯನ್ನಾಗಿ ಮಾಡುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.
ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜ್, ಮಾಜಿ ಅಧ್ಯಕ್ಷ ನಾರಾಯಣಗೌಡ, ಮಾಜಿ ಸದಸ್ಯರಾದ ಪ್ರಕಾಶ್ ಬಾಬು, ಬಿನ್ನಮಂಗಲ ವಾಸಣ್ಣ, ನಗರಸಭೆ ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಭ್, ಗ್ರಾಪಂ ಅಧ್ಯಕ್ಷೆ ಉಮಾಹರೀಶ್, ಸದಸ್ಯ ಪ್ರಹ್ಲಾದ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಸಿಂ.ಗೌಡ, ಕಾರೇಹಳ್ಳಿ ಗುರುಪ್ರಕಾಶ್, ಮಹಿಮಣ್ಣ, ಹರೀಶ್, ಜನೌಷಧ ಪ್ರದಿಪ್, ಗಣೇಶ್ ಇತರರು ಇದ್ದರು.