ಹೊಸಕೋಟೆಯ ದೊಡ್ಡನಾಲಾದ ಸೂಕ್ತ ನಿರ್ವಹಣೆ ಇಲ್ಲದೆ ಚರಂಡಿ ನೀರು ಹರಿಯುವ ಕೊಳವೆ ಪೈಪ್ಗಳಲ್ಲಿ ಘನತ್ಯಾಜ್ಯ ತುಂಬಿಕೊಂಡಿರುವುದು.
ಹೊಸಕೋಟೆ : ಪ್ರತಿ ವರ್ಷ ಮಳೆಗೂ ಮುನ್ನ ಅಧಿಕಾರಿಗಳು ನಗರದ ಚರಂಡಿಗಳನ್ನು ಸ್ವಚ್ಛ ಮಾಡದೆ ರ್ನಿಲಕ್ಷ$್ಯವಹಿಸುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕೇವಲ ಒಂದು ಗಂಟೆ ಸುರಿದ ಸಾಧಾರಣ ಮಳೆಗೇ ನಗರದ ಬಹುತೇಕ ರಸ್ತೆಗಳಲ್ಲಿ ಚರಂಡಿ ನೀರು ತುಂಬಿ ಕೆರೆಯಂತಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಲ್ಲದೆ, ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಯಿತು.
ಈ ಅವಾಂತರಕ್ಕೆ ಕಾರಣ ಚರಂಡಿ ಸ್ವಚ್ಛತೆಯಲ್ಲಿ ನಗರಸಭೆಯ ರ್ನಿಲಕ್ಷ$್ಯ ಧೋರಣೆ ಎಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಕಾಲಕಾಲಕ್ಕೆ ಮೋರಿ ಸ್ವಚ್ಛ ಮಾಡದೆ ಚರಂಡಿಗಳಲ್ಲಿ ಕಲ್ಲುಗಳು, ಪ್ಲಾಸ್ಟಿಕ್ ಕವರ್ಗಳು ಹೀಗೆ ಹಲವು ತ್ಯಾಜ್ಯ ತುಂಬಿಕೊಂಡಿದ್ದು, ಸರಾಗವಾಗಿ ಹರಿಯಬೇಕಿದ್ದ ಚರಂಡಿ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ.
ದೊಡ್ಡನಾಲ ಸ್ವಚ್ಛಗೊಂಡು ವರ್ಷಗಳೇ ಕಳೆದಿದೆ. ನಗರದ ಮಧ್ಯದಲ್ಲಿ ಹಾದು ಹೋಗಿರುವ ದೊಡ್ಡ ನಾಲಾವನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ನಗರದ ಚರಂಡಿ ನೀರು ಸರಾಗವಾಗಿ ಹರಿಯಲಿ ಎಂಬ ಉದ್ದೇಶದಿಂದ ದಶಕಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಮಾಡದೆ ದೊಡ್ಡನಾಲಾದ ತಡೆ ಗೋಡೆಗಳು ಹಾನಿಗೊಳಗಾಗಿವೆ. ಹಾಗೂ ನೀರು ಸರಾಗವಾಗಿ ಹರಿಯಲು ಹಾಕಿದ್ದ ಬೃಹತ್ ಪೈಪ್ಗಳಲ್ಲಿ ಕಲ್ಲು, ಮಣ್ಣು, ತ್ಯಾಜ್ಯ ಸಿಲುಕಿ ಕೊಳಚೆ ನೀರು ರಸ್ತೆ ಹಾಗೂ ಮನೆಗಳಿಗೂ ನುಗ್ಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಗ್ಯ ಸಮಸ್ಯೆ, ಸೊಳ್ಳೆಗಳ ಕಾಟ : ದೊಡ್ಡನಾಲ ಸೂಕ್ತ ನಿರ್ವಹಣೆಯಿಲ್ಲದೆ ದುರ್ವಾಸನೆ ಬೀರುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಿರಿಯರು ಹಾಗೂ ಮಕ್ಕಳಲ್ಲಿ ಹೆಚ್ಚು ಶ್ವಾಸಕೋಶ ಸೋಂಕು ಕಾಣಿಸಿಕೊಳ್ಳುತ್ತಿದೆ. ಸೊಳ್ಳೆಗಳ ಕಾಟದಿಂದ ಡೆಂ, ಮಲೇರಿಯಾ ಹರಡುವ ಆತಂಕ ಇದೆ ಎಂದು ಈ ಭಾಗದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಮೋರಿ ನಿಮಾರ್ಣ : ನಗರದ 22ನೇ ವಾರ್ಡ್ನಲ್ಲಿ ಚರಂಡಿ ನೀರಿಗೆ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಚರಂಡಿ ನಿಮಾರ್ಣದ ವೇಳೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ ನಿರ್ಮಿಸದೆ ಹಿಮ್ಮುಖವಾಗಿ ಮಾಡಲಾಗಿದೆ. ಮಳೆ ಬಂದರೆ ಚರಂಡಿ ನೀರು ರಸ್ತೆ ಹಾಗೂ ಮನೆಗಳಿಗೆ ನುಗುತ್ತಿದ್ದು, ಈ ಬಗ್ಗೆ 5 ವರ್ಷಗಳಿಂದ ನಗರಸಭೆಗೆ ದೂರು ನೀಡಿದರೂ ಕ್ರಮವಹಿಸಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.
ಸ್ವಚ್ಛತೆ ಮರೆತ ನಗರಾಡಳಿತ : ನಗರದಲ್ಲಿ ಹಾದು ಹೋಗುವ ಬಹುತೇಕ ರಾಜ ಕಾಲುವೆಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಪ್ರತಿಯೊಂದರಲ್ಲೂ ಕಸದ ರಾಶಿ ತುಂಬಿದೆ. ಕೆಲ ಭಾಗದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಇನ್ನೂ ಕೆಲ ರಾಜಕಾಲುವೆಗಳಿಗೆ ಅಪಾರ್ಟ್ಮೆಂಟ್ಗಳ ಮಲ ತ್ಯಾಜ್ಯ ಸಂಪರ್ಕಗೊಳಿಸಿರುವುದರಿಂದ ರಾಜಕಾಲುವೆ ಅಕ್ಕ ಪಕ್ಕ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದ್ದು, ನಗರಸಭೆ ರ್ನಿಲಕ್ಷ$್ಯ ಹಿಡಿದ ಕನ್ನಡಿಯಾಗಿದೆ.
ಐದು ವರ್ಷಗಳಿಂದ ನಗರಸಭೆ ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಬೇಸತ್ತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸದ್ಯದಲ್ಲೇ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಾರ್ವಜನಿಕರ ಶಾಪ ರ್ನಿಲಕ್ಷ$್ಯ ತೋರಿದ ಅಧಿಕಾರಿಗಳಿಗೆ ಸುಮ್ಮನೆ ಬಿಡುವುದಿಲ್ಲ.
— > ವೆಂಕಟೇಶ್ ಶಾಸ್ತ್ರಿ, 22ನೇ ವಾರ್ಡ್ನ ನಿವಾಸಿ.