ಮಂಗಳೂರು ಬಿಳಿ ಗ್ರಾನೈಟ್ ವಿಶೇಷ ಕಲ್ಲಿನಿಂದ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ಕೆಂಭಾವಿ ಪಟ್ಟಣದ ಬಜಾರ ಬಲಭೀಮಸೇನ (ಮಾರುತಿ) ದೇವಸ್ಥಾನದ ಕಟ್ಟಡ ಕಾಮಗಾರಿಯನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ವೀಸಿದರು. ವಾಮನರಾವ ದೇಶಪಾಂಡೆ, ಮಹಿಪಾಲರೆಡ್ಡಿ ಡಿಗ್ಗಾವಿ, ತಿಪ್ಪಣ್ಣ ಯಾಳಗಿ, ಶ್ರೀಶೈಲ ಆಲ್ದಾಳ, ಲಕ್ಷ$್ಮಣ ಯಲಗೋಡ ಇತರರಿದ್ದರು.
ಕೆಂಭಾವಿ: ಗುಡಿ ಗಂಡಾರ, ಮಠ ಮಾನ್ಯಗಳು ಸೇರಿ ೇತ್ರದ ಹಲವು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದು ಅವುಗಳ ಶಿಸ್ತುಬದ್ಧ ನಿರ್ವಹಣೆಗೆ ಜನರ ಸಹಕಾರ ಬಹಳ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಮಂಗಳೂರು ಬಿಳಿ ಗ್ರಾನೈಟ್ ಕಲ್ಲಿನಿಂದ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ಪಟ್ಟಣದ ಬಜಾರ ಬಲಭೀಮಸೇನ (ಮಾರುತಿ) ದೇವಸ್ಥಾನದ ಕಟ್ಟಡ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದ ಅವರು, ೇತ್ರದ ಶಹಾಪುರ, ಗೋಗಿ, ಸಗರ ಹಾಗೂ ಕೆಂಭಾವಿ ವಲಯದ ಹಲವು ದೇವಸ್ಥಾನಗಳು, ಮಠಗಳು, ಮಂದಿರಗಳು, ಮಸೀದಿಗಳಿಗೆ ಅನುದಾನ ನೀಡಿದ್ದು, ಇನ್ನೂ ನನ್ನ ಅವಧಿಯಲ್ಲಿ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಹಣ ಒದಗಿಸಿ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈ ದೇವಸ್ಥಾನದ ಅಭಿವೃದ್ಧಿಗೆ ಹಣದ ಕೊರತೆ ಇದ್ದು, ಇನ್ನಷ್ಟು ಅನುದಾನ ನೀಡುವಂತೆ ದೇವಸ್ಥಾನ ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಈಗಾಗಲೇ ಈ ದೇವಸ್ಥಾನಕ್ಕೆ 30 ಲಕ್ಷ ರೂ. ನೀಡಿದ್ದು ಕಟ್ಟಡ ಭಾರಿ ಪ್ರಮಾಣದಲ್ಲಿ ನಡೆದಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಈ ದೇವಸ್ಥಾನದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಒದಗಿಸಿ ವಿಶೇಷ ಶೈಲಿಯ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಾಮನರಾವ ದೇಶಪಾಂಡೆ, ಮಹಿಪಾಲರೆಡ್ಡಿ ಡಿಗ್ಗಾವಿ, ತಿಪ್ಪಣ್ಣ ಯಾಳಗಿ, ಶೀಶೈಲ ಆಲ್ದಾಳ, ಲಕ್ಷ$್ಮಣ ಯಲಗೋಡ, ಮಲ್ಲಿನಾಥಗೌಡ ಪೊಲೀಸ್ ಪಾಟೀಲ, ರವಿ ಸೊನ್ನದ, ರಹೆಮಾನ ಪಟೇಲ ಯಲಗೋಡ ಇದ್ದರು.