ಯಾದಗಿರಿ ತಾಲೂಕಿನ ಮುಷ್ಟೂರ ಗ್ರಾಮದಲ್ಲಿ ನಿರ್ಮಿಸಿದ ಸಿಮೆಂಟ್ ರಸ್ತೆಯನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಶುಕ್ರವಾರ ಉದ್ಘಾಟಿಸಿದರು. ಮಲ್ಲಿಕಾರ್ಜುನರಡ್ಡಿ ಮಾಲಿ ಪಾಟೀಲ್ ಕೌಳೂರ, ಶಿವರಾಜಪ್ಪಗೌಡ, ಮಲ್ಲಿಕಾರ್ಜುನ ಈಟಿ, ಶರಣಪ್ಪಗೌಡ ಕೌಳೂರ ಇತರರಿದ್ದರು.
- ಶಾಸಕ ಚನ್ನಾರೆಡ್ಡಿ ಪಾಟೀಲ್ ಹೇಳಿಕೆ
- ಮುಷ್ಟೂರದಲ್ಲಿ ಸಿಮೆಂಟ್ ರಸ್ತೆ ಉದ್ಘಾಟನೆ
ಯಾದಗಿರಿ : ತಮ್ಮ ಮತೇತ್ರದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಆದರೆ ಹಳ್ಳಿಗಳಲ್ಲಿ ಜನರು ತಮ್ಮಲ್ಲಿರುವ ಬಿನ್ನಾಭಿಪ್ರಾಯ ಮರೆತು ತಮ್ಮ ವಾರ್ಡ್ಗಳಲ್ಲಿ ಮಾಡುತ್ತಿರುವ ಕೆಲಸಗಳಿಗೆ ಒಗ್ಗಟ್ಟಿನಿಂದ ಸಹಕಾರ ನೀಡುವ ಮೂಲಕ ಅದರ ಲಾಭ ಪಡೆದುಕೊಳ್ಳಬೆಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಶುಕ್ರವಾರ ಮತೇತ್ರದ ಮುಷ್ಟೂರ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಿರುವ 1.20 ಕೋಟಿ ರೂ. ವೆಚ್ಚದ ಸಿಮೆಂಟ್ ರಸ್ತೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ತಮ್ಮ ಹೊಲ&ಗದ್ದೆಗಳಲ್ಲಿ ಬೆಳೆದ ಫಸಲನ್ನು ತರಲು ತೊಂದರೆಯಾಗುತ್ತಿತ್ತು, ಈ ವಿಷಯ ನನ್ನ ಗಮನಕ್ಕೆ ನೀವೆಲ್ಲರೂ ತಂದ ತಣ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಪ್ರತಿಯೊಬ್ಬರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ರಾಜ್ಯದ ಎಲ್ಲ ವರ್ಗದ ಜನರಿಗೆ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಹಲವಾರು ಸೌಲಭ್ಯ ಒದಗಿಸಿದೆ. ಆದರೂ ಅಭಿವೃದ್ಧಿ ಸಹಿಸದ ವಿರೋಧಿಗಳು ಕ್ಷುಲ್ಲಕ ಕಾರಣಗಳಿಗೆ ಟೀಕಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಈ ಭಾಗದ ಗ್ರಾಮಗಳಿಗೆ ಸುಗಮವಾಗಿ ತೆರಳಲು ಸೇತುವೆ ನಿರ್ಮಾಣ ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಯಡಿ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಬರುವ ದಿನಗಳಲ್ಲಿ ಗ್ರಾಮ ಪಂಚಾಯತ, ತಾಪಂ, ಜಿಪಂ ಚುನಾವಣೆಗಳು ಎದುರಾಗಲಿವೆ, ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಕೆವೈಡಿಸಿಸಿ ಬ್ಯಾಂಕ್ ಮಾಜಿ ಅಧ್ಯ ಮಲ್ಲಿಕಾರ್ಜುನರಡ್ಡಿ ಮಾಲಿ ಪಾಟೀಲ್ ಮಾತನಾಡಿ, ನಾವೂ ಅನಾದಿಕಾಲದಿಂದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮೂಲಕ ಅವರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ, ಗ್ರಾಮಗಳ ಅಭಿವೃದ್ಧಿಗಾಗಿ ಶಾಸಕ ತುನ್ನೂರ ಅವರು ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪದ ಮುಖಂಡ ಬಸರಾಜಪ್ಪಗೌಡ ದಳಪತಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಗೌಡ ಪಾಟೀಲ್, ಶಿವರಾಜಪ್ಪಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯ ಮಲ್ಲಿಕಾರ್ಜುನ ಈಟಿ, ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ಶರಣಪ್ಪಗೌಡ ಕೌಳೂರ ಸೇರಿದಂತೆ ಇತರರಿದ್ದರು.ನಿರ್ಮಿತಿ ಕೇಂದ್ರ ಇಂಜಿನಿಯರ್ರವಿಕುಮಾರ ಕಂದಕೂರ ಮಾತನಾಡಿ, ಕಾಮಗಾರಿ ವಿವರ ನೀಡಿದರು. ಈ ವೇಳೆ ರೈತರು ತಮ್ಮ ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಚನ್ನಾರಡ್ಡಿ ಪಾಟೀಲ್ ತುನ್ನೂರಶಾಸಕ ಯಾದಗಿರಿ
ನಾನು ಎಂದು ರಾಜಕಾರಣದಲ್ಲಿ ಜಾತಿ ರಾಜಕೀಯ ಮಾಡಿಲ್ಲ, ಪರಿಣಾಮ ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ನಿಮ್ಮ ಸೇವೆ ಮಾಡುವ ಅವಕಾಶ ಲಭಿಸಿದೆ. ನಾನು ೇತ್ರದಲ್ಲಿ ಮೊದಲು ಶಾಂತಿ. ಸಾಮರಸ್ಯ, ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನೇರವಾಗಿ ಭೇಟಿಯಾಗಿ ಗಮನಕ್ಕೆ ತನ್ನಿ.