ಬೂದಿಗೊಪ್ಪ ಗ್ರಾಮದ ಕರೆಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ವಿಶ್ವಾಸ ವೆದ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ನೀಲಕಂಠ ಸಿದ್ದಬಸನ್ನರ, ಚಂದ್ರು ಜಂಬ್ರಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ವಿಠ್ಠಲ ಬಂಟನೂರ, ಪುಂಡಲೀಕ ಮೇಟಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ತಲ್ಲೂರ
ಸವದತ್ತಿ ೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿವದ್ಧಿ ಕಾರ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆ ಮೆಚ್ಚಿ ವಿವಿಧ ಪಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಕೆ ಆಗಮಿಸುತ್ತಿರುವುದು ಸಂತಸವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಬೂದಿಗೊಪ್ಪ ಗ್ರಾಮದ ಕರೇಮ್ಮದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪದ 100ಕ್ಕೂ ಅಧಿಕ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಕೆ ಬರಮಾಡಿಕೊಂಡು ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಸೇವೆಗೆ ಸದಾ ಬದ್ಧ ಎಂದರು.
ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನರ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ತಾಲೂಕು ಕಾಂಗ್ರೆಸ್ ಮುಖಂಡ ಸಂತೋಷ ಹಾದಿಮನಿ ಮಾತನಾಡಿದರು. ಮಾರುತಿ ಕೊಪ್ಪದ, ಹನಮಂತ ಆಲದಕಟ್ಟಿ, ಯಲ್ಲಪ್ಪ ಪುಲ್ಲಿ, ಮಲಕಯ್ಯ ಹಿರೇಮಠ, ಮಹಾಂತೇಶ ಕೊಪ್ಪದ, ಮಲ್ಲಿಕಾರ್ಜುನ ಕೃಷ್ಣಪ್ಪನವರ, ಶಿವಾನಂದ ಕೊಪ್ಪದ ಸೇರಿದಂತೆ 100ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ ಸೇರ್ಪಡೆಗೊಂಡರು.
ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ತಾಪಂ ಮಾಜಿ ಸದಸ್ಯ ಮಲಿಕಸಾಬ್ ಬಾಗವಾನ, ಪಿಕೆಪಿಎಸ್ ಅಧ್ಯ ವಿಠ್ಠಲ ಬಂಟನೂರ, ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಮುಖಂಡರಾದ ಪ್ರಕಾಶ ವಾಲಿ, ಆರ್.ಕೆ.ಪಟಾತ, ಉಮೇಶ ಮಾಗುಂಡನವರ,
ಈರಣ್ಣ ಗೌಡರ, ಮಹಾಂತೇಶ ಉರಬೀನ್ನವರ, ರಾವೇಂದ್ರ ಗಿಡ್ಡಮಲ್ಲಪ್ಪಗೋಳ, ಚಾಯಪ್ಪ ಹುಂಡೆಕರ, ಡಾ.ಎ.ಎಂ. ಶಂಕರಲಿಂಗಪ್ಪ ಇತರರಿದ್ದರು.