People tied a suspicious person to a pole.
ಚಿಕ್ಕಬಳ್ಳಾಪುರ: ಗಿಡ್ನಹಳ್ಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹನುಮಂತಪುರದ ಬಾಲರಾಜು ಎಂಬುವವರನ್ನು ಕಂಬಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸ್ಥಳಿಯರು ಪ್ರಶ್ನಿಸಿದಾಗ ಗೊಂದಲಕಾರಿ ವರ್ತನೆ ತೋರಿದ್ದು, ಓಡಿ ಹೋಗಿ ಚಂದ್ರಂಕಿ ಚಾಕಿ ಮನೆಯಲ್ಲಿ ಆವಿತುಕೊಂಡಿದ್ದಾನೆ. ಇದರಿಂದ ಅಲ್ಲಿನ ಜನರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಮಾಹಿತಿ ಪಡೆದ ಪೊಲೀಸರು ಬಾಲರಾಜುವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಆತ ಮಾನಸಿಕ ಅಸ್ವಸ್ಥನಂತೆ, ಒಮ್ಮೊಮ್ಮೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
20 ದಿನಗಳ ಹಿಂದೆ ಗ್ರಾಮದಲ್ಲಿನ ಶನಿಮಹಾತ್ಮಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ, ಒಡವೆ ಕಳುವಾಗಿದ್ದು, ಅಪರಿಚಿತರು ದೇಗುಲದ ಆವರಣದಲ್ಲಿ ಓಡಾಡಿರುವ ವಿಡಿಯೋ ದೃಶ್ಯಗಳು ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.