People fed up with the menace of stray dogs. 
ರಾಜ್ಯ

ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಜನ

ಬೀದಿ ನಾಯಿಗಳು ಗುಂಪು-ಗುಂಪಾಗಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕದ ಮನೆ ಮಾಡಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಸಂತೆ ಬಳಿ, ಮಾಂಸದ ಅಂಗಡಿ, ವೈನ್​ ಶಾಪ್​, ಹೋಟೆಲ್​ಗಳ ಹಿಂಬದಿಗಳಲ್ಲಿ ಸೇರಿ ಬಹುತೇಕ ಕಡೆಗಳಲ್ಲಿ ನಾಯಿಗಳ ವಾಸ, ಹಾವಳಿ ಹೆಚ್ಚಳವಾಗಿದೆ.
ಜನರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ಅಷ್ಟೇ ಅಲ್ಲದೇ ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್​, ಕಾರುಗಳ ಹಿಂದೆಯೇ ಓಡಿ ಬರುತ್ತವೆ. ಸವಾರರು, ಪಾದಚಾರಿಗಳು ಭಯದಲ್ಲೇ ಸಂಚರಿಸುವಂತಾಗಿದೆ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.
ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಗ್ರಾಪಂ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.