ಯಡ್ರಾಮಿ ಪಟ್ಟಣದ ವಿನಾಯಕ ನಗರದ ಮನೆಯೊಂದರ ಮೇಲೆ ಕುಳಿತಿರುವ ಮಂಗ. 
ರಾಜ್ಯ

ಮಂಗನ ಉಪಟಳಕ್ಕೆ ಬೇಸತ್ತ ಜನ

ಪ್ರಮುಖ ಮುಖ್ಯಾಂಶಗಳು

  • ಮೂರು ತಿಂಗಳಿಂದ ಯಡ್ರಾಮಿಯಲ್ಲಿ ನೆಲೆ ಕಂಡುಕೊಂಡ ಕೋತಿ
  • ಆತಂಕದಲ್ಲಿ ನಿವಾಸಿಗಳು
ಯಡ್ರಾಮಿ: ಪಟ್ಟಣದಲ್ಲಿ ಮೂರು ತಿಂಗಳಿಂದ ಮಂಗವೊಂದರ ಉಪಟಳ ಹೆಚ್ಚಾಗಿದ್ದು, ಇದುವರೆಗೆ 5ಕ್ಕೂ ಹೆಚ್ಚು ಜನರ ಮೇಲೆ ಮಂಗ ದಾಳಿ ಮಾಡಿದ್ದರಿಂದ ಸ್ಥಳಿಯರು ಆತಂಕದಲ್ಲೇ ಅಲೆದಾಡುವಂತಾಗಿದೆ.
ಮೂರು ತಿಂಗಳ ಹಿಂದೆ ಬಸವೇಶ್ವರ ದೇವಸ್ಥಾನ ಹತ್ತಿರ ಮಂಗ ಕಾಣಿಸಿಕೊಂಡಿತ್ತು. ರಾತ್ರಿ ಗಿಡದಲ್ಲಿ ಇರುತ್ತಿದ್ದ ಮಂಗ ಹಗಲಲ್ಲಿ ಮನೆಯಿಂದ ಮನೆಗೆ ಜಿಗಿಯುತ್ತ ಚೇಷ್ಟೆ ಮಾಡುತ್ತಿತ್ತು. ಪ್ರಾರಂಭದಲ್ಲಿ ಜನರಿಗೆ ಯಾವುದೇ ತೊಂದರೆ ನೀಡುತ್ತಿರಲಿಲ್ಲ. ಆದರೆ ಎರಡ್ಮೂರು ದಿನ ನಂತರ ನಿವಾಸಿಗಳಿಗೆ ಕಾಟ ಕೊಡಲು ಪ್ರಾರಂಭಿಸಿತು. ಯುವಕರೆಲ್ಲ ಒಟ್ಟಾಗಿ ಓಡಿಸಲು ಪ್ರಯತ್ನಿಸಿದರೂ ಒಂದೆರಡು ದಿನ ಬೇರೆಡೆ ತೆರಳಿ ಮತ್ತೆ ಬರುತ್ತಿತ್ತು. ಸದ್ಯ ವಿನಾಯಕ ನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿನ ನಿವಾಸಿಗಳ ಮೇಲೆ ದಾಳಿ ಮಾಡುತ್ತಿದೆ.
ಬೆಳಗಾಗುತ್ತಲೇ ಗಿಡ&ಮರದಿಂದ ಕೆಳಗಿಳಿಯುವ ಮಂಗ ಬಾಗಿಲು ತೆರೆದಿರುವ ಮನೆ ಹೊಕ್ಕು ತರಕಾರಿ, ಹಣ್ಣುಗಳನ್ನು ಕೊಂಡೊಯ್ಯುತ್ತಿದೆ. ಈ ವೇಳೆ ಯಾರಾದರೂ ಎದುರಿಗೆ ಬಂದರೆ ಮೈಮೇಲೆ ಎರಗುತ್ತಿದೆ. ಹೀಗಾಗಿ ಮಹಿಳೆಯರು ಬಾಗಿಲು ಮುಚ್ಚಿಕೊಂಡೇ ಕೂಡುವಂತಾಗಿದೆ. ಮುಂಜಾಗ್ರತೆಯಾಗಿ ನಿವಾಸಿಗಳು ಮನೆಯಲ್ಲಿ ಪಟಾಕಿ ಇಟ್ಟುಕೊಂಡಿದ್ದು, ಮಂಗ ಕಾಣಿಸಿದ ತಕ್ಷಣ ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸುತ್ತಿದ್ದಾರೆ.
ಮಂಗನ ಉಪಟಳ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದು, ಕೂಡಲೇ ಸ್ಥಳಿಯ ಆಡಳಿತ ಹಾಗೂ ಅರಣ್ಯ ಅಧಿಕಾರಿಗಳು ಈ ಕಾಟದಿಂದ ಮುಕ್ತಿ ಕೊಡಿಸುವಂತೆ ಆಗ್ರಹಿಸಿದ್ದಾರೆ.
"

ಮೂರು ತಿಂಗಳಿಂದ ಮಂಗ ವಿನಾಯಕ ನಗರದಲ್ಲಿ ಓಡಾಡುತ್ತಿದೆ. ಮಕ್ಕಳು, ಮಹಿಳೆಯರು ಭಯದಲ್ಲಿ ಅಲೆದಾಡುವಂತಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಮಂಗ ಓಡಾಡುತ್ತ ಬಾಗಿಲು ತೆಗೆದ ಮನೆ ಹೊಕ್ಕು ತರಕಾರಿ, ಹಣ್ಣು ಎತ್ತಿಕೊಂಡು ಓಡುತ್ತಿದೆ. ಹೆಣ್ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣವೇ ಮಂಗ ಓಡಿಸಲು ಮುಂದಾಗಬೇಕು.> ಮಹಾನಂದ ವೀರಯ್ಯ ಹಿರೇಮಠವಿನಾಯಕ ನಗರ ನಿವಾಸಿ, ಯಡ್ರಾಮಿ

— > ಮಹಾನಂದ ವೀರಯ್ಯ ಹಿರೇಮಠ ವಿನಾಯಕ ನಗರ ನಿವಾಸಿ, ಯಡ್ರಾಮಿ
"

ಮಂಗನ ಉಪಟಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಂಗಗಳಿಗೆ ಪ್ರಚೋದನೆ ಮಾಡುವುದರಿಂದ ಆತಂಕಕ್ಕೆ ಒಳಗಾಗಿ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಸಾರ್ವಜನಿಕರು ಮಂಗನಿಂದ ಅಂತರ ಕಾಯ್ದುಕೊಳ್ಳಬೇಕು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮಂಗನ ಸ್ಥಳಾಂತರಕ್ಕೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇನೆ.> ರಮೇಶ ಬೊಮ್ಮನಳ್ಳಿಡಿಆರ್​ಎಫ್​ಒ ಯಡ್ರಾಮಿ

— > ರಮೇಶ ಬೊಮ್ಮನಳ್ಳಿ ಡಿಆರ್​ಎಫ್​ಒ ಯಡ್ರಾಮಿ