ಅಪೂರ್ಣ ಕಾಮಗಾರಿಯಿಂದ ಜನ ಹೈರಾಣು incomplete work
ಕೆಜಿಎಫ್: ನಗರದ ಜೈನ್ ಕಾಲೇಜು ಮುಂಭಾಗದ ಮೊದಲನೇ ಅಡ್ಡರಸ್ತೆ ಮತ್ತು ಶ್ಯಾಮ್ ಆಸ್ಪತ್ರೆಯ ಮುಂಭಾಗ 4ನೇ ಅಡ್ಡರಸ್ತೆಯ ಬಳಿ ಮೋರಿ ಕಾಮಗಾರಿಗಾಗಿ ಎರಡೂ ಬದಿ ುಟ್ಪಾತ್ ಅಗೆದಿದ್ದರಿಂದ ನಗರದ ಗೀತಾ ರಸ್ತೆಯಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. incomplete work
ಇಂಜಿನಿಯರ್ಗಳು ಕಾಟಾಚಾರಕ್ಕೆ ಕಾಮಗಾರಿಗಳ ವೀಕ್ಷಣೆ ಮಾಡಿ ವರದಿ ಸಲ್ಲಿಸುತ್ತಿದ್ದಾರೆ. ಮೋರಿ ನಿಮಾರ್ಣ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೂಡಲೇ ನಗರಸಭೆ ಇಂಜಿನಿಯರ್ಗಳು ಕಾಮಗಾರಿ ಪರಿಶೀಲನೆ ನಡೆಸಿ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಬೇಕಿದೆ ಎಂದು ಹಲವರು ಒತ್ತಾಯಿಸಿದರು.
ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೌರಾಯುಕ್ತ ಶ್ರೀಧರ್ ಮಾತನಾಡಿ, ಮೋರಿ ಪಕ್ಕದ ಚರಂಡಿ ಮೇಲೆ ಕಬ್ಬಿಣದ ಶೀಟ್ ಹಾಕಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಎರಡು, ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.