ಕುಷ್ಟಗಿ ಪಟ್ಟಣದ ರೈಲು ನಿಲ್ದಾಣಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೆಕ್ ಕತ್ತರಿ ಶುಕ್ರವಾರ ಸಂಭ್ರಮ ಆಚರಿಸಲಾಯಿತು. ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ್ ಬಂಗಾರಶೆಟ್ರ, ಮುಖಂಡರಾದ ಜೆ.ಜೆ.ಆಚಾರ್, ಅಭಿನಂದನ ಗೋಗಿ, ಶ್ರೀಧರ ಘೋರ್ಪಡೆ, ಶಾರದಾ ಶೆಟ್ಟರ್, ಡಾ.ಪಾರ್ವತಿ ಪಳೋಟಿ ಇದ್ದರು.
- ರೈಲು ನಿಲ್ದಾಣಕ್ಕೆ ವರ್ಷದ ಸಂಭ್ರಮ
- ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿ ಸಡಗರ
ಕುಷ್ಟಗಿ: ಇಲ್ಲಿನ ಕಂದಕೂರು ರಸ್ತೆಯಲ್ಲಿರುವ ರೈಲು ನಿಲ್ದಾಣಕ್ಕೆ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈಲ್ವೆ ಹೋರಾಟ ಸಮಿತಿ, ಸಾರ್ವಜನಿಕರು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ್ ಬಂಗಾರಶೆಟ್ರ ಮಾತನಾಡಿ, ಪಟ್ಟಣಕ್ಕೆ ದಶಕಗಳ ಕನಸಾಗಿದ್ದ ರೈಲು ನಿಲ್ದಾಣ ನಿರ್ಮಾಣಗೊಂಡು ಒಂದು ವರ್ಷ ಗತಿಸಿದ್ದು, ಜನತೆಗೆ ಖುಷಿ ನೀಡಿದೆ. ರೈಲು ಸೇವೆ ಆರಂಭದಿಂದ ಸಂಚಾರ, ವ್ಯಾಪಾರ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗಿದೆ.
ಹುಬ್ಬಳ್ಳಿಗೆ ಹೆಚ್ಚುವರಿ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಇಲಾಖೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಜೆ.ಜೆ.ಆಚಾರ್, ಅಭಿನಂದನ ಗೋಗಿ, ಶ್ರೀಧರ ಘೋರ್ಪಡೆ, ಶಾರದಾ ಶೆಟ್ಟರ್, ವಂದನಾ ಗೋಗಿ, ಡಾ.ಪಾರ್ವತಿ ಪಳೋಟಿ, ಡಾ. ರವಿಕುಮಾರ ದಾನಿ, ಮಹಾಂತಯ್ಯ ಅರಳೆಲಿಮಠ, ವೀರೇಶ್ ಕರಡಿ, ಭರತೇಶ ಜೋಷಿ ಇದ್ದರು.