ಐಷಾರಾಮಿ ಮನೆಗಳ ವಿನ್ಯಾಸ ಬದಲು 
ರಾಜ್ಯ

ಮನಸ್ಸಿಗೆ ನೆಮ್ಮದಿ ನೀಡುವ ಮನೆಗಳ ಖರೀದಿಗೆ ಜನರ ಚಿತ್ತ................ buy homes

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಐಷಾರಾಮಿ ಮನೆಗಳ ವಿನ್ಯಾಸ ಬೇರೆ ಇತ್ತು. ಭವ್ಯವಾದ ಅಲಂಕಾರಿಕ ಒಳಾಂಗಣ ವಿನ್ಯಾಸಗಳನ್ನು ನಿರ್ಮಿಸಲಾಗುತ್ತಿತ್ತು. ಇದೀಗ ಅಪಾರ್ಟ್‌ಮೆಂಟ್, ವಿಲ್ಲಾ ಹಾಗೂ ವಾಸದ ಮನೆಗಳ ವಿನ್ಯಾಸದಲ್ಲಿ ಮಹತ್ವ ಬದಲಾವಣೆಯಾಗಿದೆ. ಜೀವನಶೈಲಿ ಬದಲಾದಂತೆ ಜನರು ಮನೆಗಳ ವಿನ್ಯಾಸವನ್ನು ಕಾಲಕ್ಕೆ ತಕ್ಕಂತೆ ಬದಲಿಸಲು ಬಯಸುತ್ತಿದ್ದು, ಮನಸ್ಸಿಗೆ ನೆಮ್ಮದಿ ನೀಡುವ ಮನೆಗಳ ಖರೀದಿಗೆ ಜನರು ಚಿತ್ತ ಹರಿಸಿದ್ದಾರೆ.
ದೇಶದಲ್ಲಿ ಸಾಕಷ್ಟು ಕುಟುಂಬಗಳು ಹೆಚ್ಚು ಒತ್ತಡದಲ್ಲಿ ಜೀವನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಐಷಾರಾಮದ ಮನೆಯ ಅರ್ಥವೂ ಬದಲಾಗಿದೆ. ಇಂದು ನಿಮ್ಮ ಮನೆಯನ್ನು ಎಷ್ಟು ಜನ ಮೆಚ್ಚುತ್ತಾರೆ ಎಂಬುದಕ್ಕಿಂತ, ಆ ಮನೆ ನಿಮಗೆ ಹೇಗೆ ನೆಮ್ಮದಿ ನೀಡಲಿದೆ ಎಂಬುದು ಮುಖ್ಯವಾಗಿದೆ. ಹಾಗಾಗಿ, ಅಪಾರ್ಟ್‌ಮೆಂಟ್, ಮನೆ, ವಿಲ್ಲಾ ಹಾಗೂ ಗಗನಚುಂಬಿ ಕಟ್ಟಡಗಳಲ್ಲಿ ಆರೋಗ್ಯಕರ ಜೀವನಶೈಲಿ ನಡೆಸುವುದು ಜನರ ಪ್ರಮುಖ ಆದ್ಯತೆ ನೀಡಲಾಗುತ್ತಿದೆ.
ಪರಿಸರಸ್ನೇಹಿ ಉದ್ದೇಶಗಳನ್ನು ಇಟ್ಟುಕೊಂಡು ಮನೆ ನಿರ್ಮಾಣಕ್ಕೆ ಜನರು ಆಲೋಚಿಸುತ್ತಿದ್ದಾರೆ. ತಾಜಾ ಗಾಳಿ ಮತ್ತು ನೈಸರ್ಗಿಕ ಬೆಳಕಿಗೆ ಆದ್ಯತೆ ನೀಡುತ್ತಿದ್ದಾರೆ. ಕಟ್ಟಡಗಳ ಒಳಗೆ ವಿಶಾಲವಾದ ಜಾಗ, ಮಾಲಿನ್ಯ ನಿಯಂತ್ರಣ ಅಗತ್ಯ ಕ್ರಮ ಸೇರಿ ಭೌಗೊಳಿಕ ಅಗತ್ಯ ತಕ್ಕಂತೆ ವಿನ್ಯಾಸದ ಮೂಲಕ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಈ ಕುರಿತು ಪೌಲೋಮಿ ಎಸ್ಟೇಟ್ಸ್ ನಿರ್ದೇಶಕರಾದ ಪ್ರಶಾಂತ್ ರಾವ್ ಮಾತನಾಡಿ, "ಇಂದಿನ ಜನರು ಕೇವಲ ಇತರರಿಗೆ ತೋರಿಸಿಕೊಳ್ಳುವ ಮನೆಗಳನ್ನು ಬಯಸುವುದಿಲ್ಲ. ಜೀವನಶೈಲಿಗೆ ಪೂರಕವಾಗಿರುವ ಮನೆಗಳನ್ನು ಹುಡುಕುತ್ತಿದ್ದಾರೆ. ಮಾನಸಿಕ ಒತ್ತಡ ಕಡಿಮೆ ಮಾಡುವ, ದೈನಂದಿನ ಬದುಕಿನ ವೇಗವನ್ನು ಸಮತೋಲನಗೊಳಿಸುವ, ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತೇಜಿಸುವ ವಾತಾವರಣದ ಮನೆಗಳನ್ನು ಬಯಸುತ್ತಿದ್ದಾರೆ ಎಂದರು.
ಗಾಳಿ, ವಿಶಾಲತೆ, ಹಸಿರು ಪರಿಸರ ಮತ್ತು ಮೌನದ ಸೊಗಡನ್ನು ಒಳಗೊಂಡ ಮನೆಗಳು ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಈ ದೃಷ್ಟಿಕೋನವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುವ ಸಂಸ್ಥೆಗಳಲ್ಲಿ ಪೌಲೋಮಿ ಎಸ್ಟೇಟ್ಸ್ ಪ್ರಮುಖವಾಗಿದೆ. ಆಡಂಬರದ ಪ್ರದರ್ಶನಕ್ಕಿಂತ ಮನಸ್ಸಿಗೆ ನೆಮ್ಮದಿ ನೀಡುವ ಜೀವನಶೈಲಿಯನ್ನೇ ತನ್ನ ಯೋಜನೆಗಳ ಮೂಲಕ ಪೌಲೋಮಿ ಎಸ್ಟೇಟ್ಸ್ ರೂಪಿಸುತ್ತಿದೆ. ಅದರ ಪ್ರತಿಯೊಂದು ಯೋಜನೆಯು ಸಹಜತೆ, ಸಮತೋಲನ ಮತ್ತು ಮಾನವೀಯತೆ ಪ್ರತಿಬಿಂಬಿಸುತ್ತದೆ ಎಂದರು.